ಬಳ್ಳಾರಿ:ಮಹಾನಗರ ಪಾಲಿಕೆ ಸದಸ್ಯರ ಐದು ಅವಧಿ ಪೂರ್ಣಗೊಂಡು ಎರಡು ವರ್ಷ ಕಳೆದರೂ ಪಾಲಿಕೆ ಚುನಾವಣೆಗೆ ಮಾತ್ರ ಕಾಯಕಲ್ಪ ದೊರೆತಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳ ಆಡಳಿತ ಯಂತ್ರಾಂಗ ಸಂಪೂರ್ಣ ಕುಸಿದಿದ್ದು, ಅಧಿಕಾರ ವರ್ಗದವರ ಆಟಕ್ಕೆ ತಾಳ ಹಾಕುವ ಪರಿಸ್ಥಿತಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಬಂದೊದಗಿದೆ.
ಮಹಾನಗರ ಪಾಲಿಕೆ ಆಡಳಿತಾವಧಿ ಪೂರ್ಣಗೊಂಡ ಐದು ವರ್ಷ ಮುಗಿದು,ಎರಡು ವರ್ಷಗಳು ಕಳೆದಿವೆ. ಈವರೆಗೂ ಪಾಲಿಕೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಇಚ್ಛಾಸಕ್ತಿ ತೋರಿಲ್ಲ. ರಾಜ್ಯ ಸರ್ಕಾರದ ನಿಯಮಾನುಸಾರ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಪೂರ್ಣಗೊಂಡ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕಿತ್ತು. ಆದರೆ, ಬಳ್ಳಾರಿ ಮಹಾನಗರ ಪಾಲಿಕೆ ಮಟ್ಟಿಗೆ ಅದು ಅನ್ವಯಿಸಿಲ್ಲ ಎಂಬುದೇ ಇಲ್ಲಿನ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಆಡಳಿತಾವಧಿ ಪೂರ್ಣಗೊಂಡ ಬಳಿಕ ಪಾಲಿಕೆಯಲ್ಲಿ ಆಯುಕ್ತರ ಕಾರು ಬಾರು ಜೋರಾಗಿದೆ. ಅವರು ಮಾಡಿದ್ದೇ ಕಾನೂನು, ರೀತಿ - ರಿವಾಜುಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ತಲೆಯಾಡಿಸುವ ಸಂಸ್ಕೃತಿ ಜಾರಿಯಲ್ಲಿದೆ. ಹೀಗಾಗಿ ಪಾಲಿಕೆಯಲ್ಲಿ ಲಂಗು -ಲಗಾಮು ಇಲ್ಲದ ಕಾರಣಕ್ಕೆ ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿದ್ದರೆ ಅದನ್ನು ಪ್ರಶ್ನಿಸುವ ಅಥವಾ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದಕ್ಕೆ ಸಹಕಾರಿಯಾಗುತ್ತಿತ್ತು. ಆದರೆ, ಇದಕ್ಕೆ ಯಾವುದೇ ಮಾರ್ಗ ಇಲ್ಲದಿದ್ದರಿಂದ ಪಾಲಿಕೆಯ ಅಧಿಕಾರವರ್ಗದವರ ಆಡಳಿತ ಯಂತ್ರಾಂಗಕ್ಕೆ ಕಡಿವಾಣ ಹಾಕೋದೆ ಕ್ಲಿಷ್ಟಕರ ಆಗಿದೆ ಎಂಬ ದೂರುಗಳು ಕೇಳಿ ಬಂದಿವೆ.
ಮೀಸಲಾತಿ ಟ್ರಬಲ್: