ಬಳ್ಳಾರಿ :ಬ್ಯಾಂಕಿನ ಮೂಲಕ ಉಳಿತಾಯ ಖಾತೆದಾರರಿಗೆ ನೇರವಾಗಿ ಹಣ ಸಂದಾಯ ಮಾಡುವ ಭರವಸೆ ನೀಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲ ಖಾತೆದಾರರಿಗೆ ಹಣ ಸಂದಾಯ ಮಾಡಿಲ್ಲದಿರುವುದು ಬಡವರ ಆಕ್ರೋಶಕ್ಕೆ ಕಾರಣವಾಗಿದೆ.
ಗಣಿನಾಡಲ್ಲಿ ಬ್ಯಾಂಕ್ಖಾತೆಗಳಿಗೆ ಜಮೆಯಾಗದ ಹಣ.. ಸರ್ಕಾರದ ವಿರುದ್ಧ ಆಕ್ರೋಶ - ballari latest news
ತಾಲೂಕಿನ ಕಪ್ಪಗಲ್ಲು- ಸಿರವಾರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶಾಖೆ ಎದುರು ಸಾಲಾಗಿ ನಿಂತು, ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂದಾಯ ಮಾಡಿರುವ ಹಣಕ್ಕಾಗಿ ಜನರು ಕಾದು ಕುಳಿತಿದ್ದಾರೆ. ಕೆಲ ಉಳಿತಾಯ ಖಾತೆಗಳಿಗೆ ಈಗಾಗಲೆ ಎರಡು ಬಾರಿ ಹಣ ಸಂದಾಯವಾಗಿದೆ. ಇನ್ನು ಕೆಲವು ಖಾತೆಗಳಿಗೆ ಹಣ ಸಂದಾಯ ಆಗುವುದರಿಂದ ಬಡ ಮತ್ತು ಕೂಲಿ ಕಾರ್ಮಿಕರು ಬ್ಯಾಂಕಿನ ಅಧಿಕಾರಿ - ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಕಪ್ಪಗಲ್ಲು - ಸಿರವಾರ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಶಾಖೆ ಎದುರು ಸಾಲಾಗಿ ನಿಂತು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂದಾಯ ಮಾಡಿರುವ ಹಣಕ್ಕಾಗಿ ಜನರು ಕಾದು ಕುಳಿತಿದ್ದಾರೆ. ಕೆಲ ಉಳಿತಾಯ ಖಾತೆಗಳಿಗೆ ಈಗಾಗಲೆ ಎರಡು ಬಾರಿ ಹಣ ಸಂದಾಯವಾಗಿದೆ. ಇನ್ನು ಕೆಲವು ಖಾತೆಗಳಿಗೆ ಹಣ ಸಂದಾಯ ಆಗುವುದರಿಂದ ಬಡ ಮತ್ತು ಕೂಲಿ ಕಾರ್ಮಿಕರು ಬ್ಯಾಂಕಿನ ಅಧಿಕಾರಿ - ಸಿಬ್ಬಂದಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಲ, ಮನೆ ಉಳ್ಳವರಿಗೇನೇ ಆಳುವ ಸರ್ಕಾರಗಳು ಹಣ ಸಂದಾಯ ಮಾಡುತ್ತ ಹೋದರೆ ನಮ್ಮಂಥ ಬಡ ಮತ್ತು ಕೂಲಿ ಕಾರ್ಮಿಕರ ಪಾಡೇನು?. ಸಿರವಾರದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನ ಹೊಂದಿರುವ ನಾನು, ಸಾಲ ಸೂಲ ಪಡೆದಿರುವೆ, ಅದನ್ನ ಮರುಪಾವತಿ ಕೂಡ ಮಾಡಿದ್ದೇನೆ. ನಾನೊಬ್ಬಳು ಬಡವಿ. ಈವರೆಗೂ ಯಾವುದೇ ರೀತಿಯ ಹಣವೂ ಕೂಡ ನನ್ನ ಖಾತೆಗೆ ಸಂದಾಯ ಆಗಿಲ್ಲ ಎಂದು ಸಿರವಾರ ಗ್ರಾಮದ ನೀಲಮ್ಮ ಈ ಟಿವಿ ಭಾರತ ಎದುರು ತಮ್ಮ ಅಳಲು ತೋಡಿ ಕೊಂಡಿದ್ದಾರೆ.