ಬಳ್ಳಾರಿ:ಜಿಲ್ಲೆಯ ಕಂಪ್ಲಿ ಸಮೀಪದ ರಾಜು ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರು ತಿಮ್ಮಣ್ಣರನ್ನು ಅಮಾನತು ಮಾಡಲಾಗಿದೆ. ಬಿಸಿ ಊಟದ ಹಣ ದುರುಪಯೋಗ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ. ಡಿಡಿಪಿಐ ಅಂದಾನಪ್ಪ ಎಂ ವಡಗೇರಿ ಆದೇಶ ಹೊರಡಿಸಿದ್ದಾರೆ.
ಶಾಲೆಯಲ್ಲಿ ಬಿಸಿಯೂಟ ನಿರ್ವಹಣೆಯ ಹಣಕಾಸಿನ ದುರುಪಯೋಗ ಮತ್ತು ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಾರ್ವಜನಿಕ ಶಿಕ್ಷಣ ಇಲಾಖೆ ಪಶ್ಚಿಮ ವಲಯ ಕುರುಗೋಡು ಶಿಫಾರಸು ವರದಿಯ ಆಧಾರದ ಮೇರೆಗೆ ಅಮಾನತುಗೊಳಿಸಲಾಗಿದೆ. ತಿಮ್ಮಣ್ಣ ಅವರು ಶಾಲಾ ಬಿಸಿಯೂಟದ ಖಾತೆಯಲ್ಲಿ ರೂ. 15 ಸಾವಿರ ಡ್ರಾ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.