ಹೊಸಪೇಟೆ:ನಗರದ ಸರ್ಕಾರಿ ಕಚೇರಿಗಳ ಆವರಣಗಳು ಗುಂಡಿಗಳ ತಾಣವಾಗಿ ಮಾರ್ಪಾಡಾಗಿದ್ದು, ಸಮಸ್ಯೆಗಳನ್ನು ಪರಿಹರಿಸಲುಸಿಕೊಳ್ಳಲು ಬರುವ ಜನರು ತೊಂದರೆ ಅನುಭವಿಸುವಂತಾಗಿದೆ.
ನಗರದ ತಹಶೀಲ್ದಾರ್ ಕಚೇರಿ, ಆರ್ಟಿಒ, ಕೆಇಬಿ ಹಾಗೂ ಕೃಷಿ ಇಲಾಖೆ ಕಚೇರಿಗಳ ಆವರಣಗಳು ಗುಂಡಿಗಳಿಂದ ಕೂಡಿದ್ದು, ರಸ್ತೆ ಎಲ್ಲಿದೇ ಎಂಬುದು ಕಾಣಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಮಳೆಗಾಲ ಆರಂಭವಾದರೆ ಸಾಕು ಕಚೇರಿಗಳ ಆವರಣ ಗುಂಡಿಗಳ ತಾಣವಾಗುತ್ತದೆ. ಈ ಸಮಸ್ಯೆಗಳನ್ನು ಹೋಗಲಾಡಿಸಲು ಅಧಿಕಾರಿಗಳು ಪ್ರಯತ್ನ ಮಾಡುತ್ತಿಲ್ಲ. ಕೇವಲ ಕಚೇರಿ ಕೋಣೆಗೆ ಸಿಮೀತರಾಗಿದ್ದಾರೆ. ಮಳೆಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ತಹಶೀಲ್ದಾರ್ ಎಚ್.ವಿಶ್ವನಾಥ್ ಈ ಕುರಿತು ಮಾತನಾಡಿ, ಸತತ ಮಳೆಯಾಗುತ್ತಿದೆ ಹಾಗಾಗಿ ಗುಂಡಿಗಳು ನಿರ್ಮಾಣಗೊಂಡಿವೆ. ಗುಂಡಿಗಳಿಗೆ ಗ್ರಾವೆಲ್ ಹಾಕಿಸಿ ಸಮಸ್ಯೆ ಪರಿಹರಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.