ಬಳ್ಳಾರಿ: ಗುರು ಮತ್ತು ಶಿಷ್ಯರ ಸಂಬಂಧ ಗಟ್ಟಿಯಾಗಿಬೇಕು ಮತ್ತು ವ್ಯಕ್ತಿಗೆ ಜೀವನದಲ್ಲಿ ಮಾನವೀಯ ಮೌಲ್ಯಗಳು ಬಹಳ ಮುಖ್ಯ ಎಂದು ಹಿರಿಯ ಶಿಕ್ಷಕ ಗೋಪಾಲರಾವ್ ಹೇಳಿದರು.
ಸಿರುಗುಪ್ಪದಲ್ಲಿ ಗುರುವಂದನೆ, ಶಿಕ್ಷಕರ ಪಾದಪೂಜೆ ಮಾಡಿದ ಹಳೇ ವಿದ್ಯಾರ್ಥಿಗಳು! - Government High School in Ravihal Village, Siruguppa Taluk
ಗುರು ಮತ್ತು ಶಿಷ್ಯರ ಸಂಬಂಧ ಗಟ್ಟಿಯಾಗಿಬೇಕು ಮತ್ತು ವ್ಯಕ್ತಿಗೆ ಜೀವನದಲ್ಲಿ ಮಾನವೀಯ ಮೌಲ್ಯಗಳು ಬಹಳ ಮುಖ್ಯ ಎಂದು ಹಿರಿಯ ಶಿಕ್ಷಕ ಗೋಪಾಲರಾವ್ ಹೇಳಿದರು.

ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ 2005 - 2006ನೇ ಸಾಲಿನ ವಿದ್ಯಾರ್ಥಿಗಳು ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ವಿದ್ಯೆ ಕಲಿಸಿದ ಗುರುಗಳ ಪಾದಪೂಜೆ ಮಾಡಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿದರು. ನಂತರ ಹಳೆಯ ಶಿಕ್ಷಕರಾದ ಸುಧಾಕರ್, ವೆಂಕಟೇಶ್, ಲಕ್ಷ್ಮೀಕಾಂತ ರಡ್ಡಿ, ವಿಜೇಂದ್ರ, ಪಂಕಜ್, ಮಹಾಂತೇಶ, ಶೈಲಾಜಾ, ಮಾದಣ್ಣ, ಶ್ರೀನಾಥ್, ಗುರು ಮತ್ತು ವಿದ್ಯಾರ್ಥಿಗಳಾದ ವೀರೇಶ್, ರಾಮಲಿಂಗಪ್ಪ, ನಾಗರಾಜ್, ಸಿದ್ದಪ್ಪ, ವೀರನಗೌಡ, ಸುವರ್ಣ, ಜ್ಯೋತಿ, ಲಕ್ಷ್ಮೀ ಮಮಾತಜ್, ಗಂಗಮ್ಮ, ಈರಮ್ಮ ಅವರನ್ನು ಸನ್ಮಾನಿಸಲಾಯಿತು.
ಶಾಲೆಯಲ್ಲಿನ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿ ತಮಾಷೆ ಮಾಡುತ್ತಾ ಸಖತ್ ಎಂಜಾಯ್ ಮಾಡಿದರು. ಅನೇಕ ಹಿರಿಯ ಶಿಕ್ಷಕರು, ತಾವು ಕಲಿಸಿದ ಪಾಠ-ಪ್ರವಚನ, ಅಂದಿನ ಸಮಸ್ಯೆಗಳ ಬಗ್ಗೆ ಮೆಲಕು ಹಾಕಿ ಭಾವುಕರಾದರು. ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಕಲಿತ ನೂರಾರು ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು.