ಕರ್ನಾಟಕ

karnataka

ETV Bharat / state

ಬಳ್ಳಾರಿಯ ಈ ಸರ್ಕಾರಿ ಶಾಲೆಗೆ ಬೇಕಾಗಿದೆ ದುರಸ್ತಿ ಭಾಗ್ಯ

ಬಳ್ಳಾರಿ ತಾಲೂಕಿನ ಸಿರವಾರ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯು ಶಿಥಿಲಾವಸ್ಥೆ ತಲುಪಿದ್ದು, ಮಕ್ಕಳು ಆತಂಕದಲ್ಲೇ ಶಾಲೆಗೆ ಹೋಗುವಂತಾಗಿದೆ.

By

Published : Jun 11, 2019, 11:39 PM IST

ಸೋರುತಿಹುದು ಶಾಲೆ ಕೊಠಡಿ ಮಾಳಿಗೆ

ಬಳ್ಳಾರಿ: ಜಿಲ್ಲೆಯ ಅಣತಿ ದೂರದಲ್ಲಿರುವ ಸಿರವಾರ ಗ್ರಾಮದ ಸರ್ಕಾರಿ ಶಾಲೆ ಅವ್ಯವಸ್ಥೆಗಳ ಆಗರವಾಗಿದ್ದು, ವಿದ್ಯಾರ್ಥಿಗಳ ಪಾಲಿಗೆ ನರಕವಾಗಿ ಪರಿಣಮಿಸಿದೆ.

ಈ ಶಾಲೆಯ ಕೊಠಡಿಯ ನಾಲ್ಕು ಕಡೆಗಳಲ್ಲೂ ಗೋಡೆಗಳು ಬಿರುಕು ಬಿಟ್ಟಿವೆ. ಮಳೆ ಬಂದಾಗ ಎಲ್ಲಾ ಮೂಲೆಗಳಿಂದಲೂ ಮಳೆ ನೀರು ಸರಾಗವಾಗಿ ಒಳನುಗ್ಗುತ್ತದೆ. ಇಡೀ ಶಾಲೆಯ ಬಹುತೇಕ ಎಲ್ಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಇಂಥ ಅವ್ಯವಸ್ಥೆಯಲ್ಲಿ ಮಕ್ಕಳು ಪ್ರತಿನಿತ್ಯ ವಿದ್ಯಾಭ್ಯಾಸ ಮಾಡುವ ಅನಿವಾರ್ಯ ಪರಿಸ್ಥಿತಿ ಈ ಮಕ್ಕಳದ್ದಾಗಿದೆ. ಶಾಲೆಯಲ್ಲಿರುವ ಬೇರೆ ಬೇರೆ ತರಗತಿಗಳ ಒಳಹೊಕ್ಕು ನೋಡಿದ್ರೆ, ಇದೇನು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವ ಕೊಠಡಿಯೋ ಅಥವಾ ನಿರುಪಯುಕ್ತ ಸಾಮಾಗ್ರಿಗಳನ್ನು ತುಂಬಿಡುವ ಉಗ್ರಾಣವೋ ಎಂಬ ಸಂದೇಹ ಕಾಡದೆ ಇರದು. ತಗಡಿನ ಶೀಟು, ಮುರಿದ ಆಸನಗಳು ಸೇರಿದಂತೆ ಇತರೆ ಸಾಮಾಗ್ರಿಗಳು ತುಕ್ಕು ಹಿಡಿದಿವೆ. ಈ ಅವ್ಯವಸ್ಥೆಯ ಆಗರದಲ್ಲೇ‌ ಹೆಚ್ಚುವರಿ ವಿದ್ಯಾರ್ಥಿಗಳನ್ನೂ ಕುಳ್ಳಿರಿಸಿ ಪಾಠ ಮಾಡಲಾಗುತ್ತಿದೆ. 16 ಕೊಠಡಿಗಳಿರುವ ಈ ಶಾಲೆಯಲ್ಲಿ ಒಟ್ಟು 800ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

ಸೋರುತಿಹುದು ಶಾಲೆ ಕೊಠಡಿ ಮಾಳಿಗೆ
ಅದೆಷ್ಟೋ ಮಕ್ಕಳ ಉತ್ತಮ ಭವಿಷ್ಯಕ್ಕೆ ಕಾರಣವಾಗಬೇಕಾಗಿದ್ದ ಸರ್ಕಾರಿ ಶಾಲೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಇದು ಮಕ್ಕಳ ಭವಿಷ್ಯಕ್ಕೆ ಮುಳುವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಶಿಕ್ಷಣ ಇಲಾಖೆ ಈ ಶಾಲೆಯತ್ತ ಗಮನಹರಿಸಿ ಕನಿಷ್ಠ ಸೌಕರ್ಯವನ್ನಾದ್ರೂ ಒದಗಿಸಿ ಮಕ್ಕಳು ನಿಶ್ಚಿಂತೆಯಿಂದ ಶಾಲೆಗೆ ಹೋಗುವಂತೆ ಮಾಡಬೇಕಾಗಿದೆ.

ABOUT THE AUTHOR

...view details