ಕರ್ನಾಟಕ

karnataka

ETV Bharat / state

ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್...  ಮೈಲಾರಲಿಂಗೇಶ್ವರನ ಕಾರಣಿಕ - ಹಕ್ಕಂಡಿ ಮೈಲಾರ ಲಿಂಗೇಶ್ವರ ಕಾರ್ಣಿಕ

ಹೂವಿನ ಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ನುಡಿಯುವ ಕಾರಣಿಕ ಉತ್ತರ ಕರ್ನಾಟಕ ಭಾಗದಲ್ಲಿ ತುಂಬಾ ಫೇಮಸ್​. ಗೊರವಯ್ಯನ ಕಾರಣಿಕ ಅವಲಂಬಿಸಿ ನಾಡಿನ ಆಗುಹೋಗುಗಳ ಜೊತೆ ರೈತರು ಕೂಡ ತಮ್ಮ ವ್ಯವಸಾಯದ ಬಗ್ಗೆ ಯೋಜನೆ ರೂಪಿಸುತ್ತಾರೆ.

ballary
ಮೈಲಾರಲಿಂಗೇಶ್ವರನ ಕಾರಣಿಕ

By

Published : Dec 13, 2019, 1:33 PM IST

ಬಳ್ಳಾರಿ:ಜೋಡೆತ್ತಿನ ಕೂರಿಗಿ ಮುಗ್ಗರಿಸುತ್ತಲೇ ಪರಾಕ್ ಎಂದು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಗೊರವಯ್ಯ ಭವಿಷ್ಯ ನುಡಿದಿದ್ದಾನೆ.

ಹಕ್ಕಂಡಿ ಗ್ರಾಮದ ಗೊರವಯ್ಯ ಹವಳದ ಚನ್ನನಗೌಡ್ರು ಭಾನೆತ್ತರದ ನಿಲಗಂಬಿ‌ ಮೇಲೇರಿ ಸದ್ದಲೇ ಎನ್ನುತ್ತಲೇ ಈ ದೈವವಾಣಿಯನ್ನು ನುಡಿದು ಬಳಿಕ, ಕೆಳಗಡೆ ಬಿದ್ದರು.‌ ಗೊರವಯ್ಯನನ್ನು ಸುತ್ತಲೂ ಸೇರಿದ್ದ ಭಕ್ತರು ರಕ್ಷಣೆ ಮಾಡಿದ್ರು. ನಿನ್ನೆ ಸಂಜೆ ನಡೆದ ಈ ಕಾರ್ಣಿಕೋತ್ಸವಕ್ಕೆ ನೂರಾರು ಭಕ್ತರು ಸಾಕ್ಷಿಯಾದರು.

ಮೈಲಾರಲಿಂಗೇಶ್ವರನ ಕಾರಣಿಕ

ಹಕ್ಕಂಡಿ ಮೈಲಾರ ಲಿಂಗೇಶ್ವರ ಕಾರ್ಣಿಕ ಈ ಭಾಗದಲ್ಲಿ ಹೆಚ್ಚು ಖ್ಯಾತಿ ಹೊಂದಿದೆ. ಈ ಬಾರಿ ಗೊರವಯ್ಯ ನುಡಿದ "ಜೋಡೆತ್ತಿನ ಕೂರಿಗಿ ಮುಗ್ಗರಿಸಿತಲೇ ಪರಾಕ್" ಕಾರಣಿಕ ಅಶುಭ ಸೂಚಕವೆನ್ನಲಾಗಿದೆ. ಈ ಕಾರಣಿಕದಂತೆ ರೈತಾಪಿ ವರ್ಗಗಳಿಗೆ ಅಶುಭವಾಗಲಿದೆ. ಜೊಡೆತ್ತುಗಳನ್ನ ಬಳಸಿಕೊಂಡು ಬಿತ್ತುವಾಗ, ಬಿತ್ತುವ ಕೂರಿಗಿ ಮುಗ್ಗರಿಸಿ ಬೀಳುವುದು ಎಂಬುದು ಈ ಕಾರಣಿಕದ ಅರ್ಥ, ಹೀಗಾಗಿ ಈ ಭಾಗದ ರೈತರಲ್ಲಿ ಬೇಸರ ಮನೆ ಮಾಡಿದೆ.

ABOUT THE AUTHOR

...view details