ಹೊಸಪೇಟೆ: ಉತ್ತರ ಕರ್ನಾಟಕ ಭಾಗವು ಪ್ರಾಣಿ ಪಕ್ಷಿಗಳು ವಾಸಿಸಲು ಸೂಕ್ತ ತಾಣವಾಗಿದ್ದು, ವನ್ಯಜೀವಿಗಳನ್ನು ಕಾಪಾಡುವತ್ತ ಜನರು ಹೆಜ್ಜೆ ಇಡಬೇಕು ಹಾಗೂ ಕಮಲಾಪುರದಲ್ಲಿ ನಿರ್ಮಿಸಲಾದ ಮೃಗಾಲಯದ ಬಗ್ಗೆ ಜನ ಸಾಮಾನ್ಯರ ಭಾಷೆಯಲ್ಲಿಯೇ ಸೂಕ್ತ ಮಾಹಿತಿ ನೀಡಬೇಕು ಎಂದು ಐಎಫ್ಎಸ್ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರಿನ ಬಿ.ಪಿ.ರವಿ ಹೇಳಿದರು.
ತಾಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜಿಯೋಜಿಕಲ್ ಪಾರ್ಕ್ ಕರಡಿಧಾಮ ಸಭಾಂಗಣದಲ್ಲಿ ಉತ್ತರ ಕರ್ನಾಟಕ ವನ್ಯ ಜೀವಿಗಳ ಸಂರಕ್ಷಣೆ ಕಾರ್ಯಗಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶವು ಸಂಪತ್ತಿನ ದೇಶವಾಗಿದೆ, ಕಾಡುಗಳಲ್ಲಿರುವ ಪ್ರಾಣಿಗಳನ್ನು ಕಾಪಾಡುವುದು ನಮ್ಮೆಲ್ಲರ ಮುಖ್ಯ ಕರ್ತವ್ಯ. ವನ್ಯ ಜೀವಿಗಳ ಬಗ್ಗೆ ಸೂಕ್ತ ಮಾಹಿತಿ ಪಡೆದು ಅವಗಳನ್ನು ಕಾಪಾಡುವತ್ತ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.