ಬಳ್ಳಾರಿ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕುಡಿವ ನೀರಿನ ವ್ಯವಸ್ಥೆ, ಕೆರೆಗಳನ್ನು ಜೀರ್ಣೋದ್ಧಾರ ಮಾಡಿ ನೀರು ತುಂಬಿಸುವ ಮತ್ತು ಇನ್ನಿತರ ಕೆಲಸ ಮಾಡುತ್ತೇವೆ. ಆದ್ದರಿಂದ ಬಹುಜನ ಸಮಾಜ ಪಾರ್ಟಿಗೆ ಒಂದು ಅವಕಾಶ ಕೊಡಿ ಎಂದು ಬಿಎಸ್ಪಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಸವರಾಜ್ ಹೇಳಿದರು.
ನಗರದ ಬಾಲಾ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಳ್ಳಾರಿಯ ನಗರದಲ್ಲಿ ಕುಡಿವ ನೀರು 10 ರಿಂದ 12 ದಿನಗಳಿಗೊಮ್ಮೆ ಬರುತ್ತೆ, ನಗರದ ಜನರಿಗೆ ನೀರು ಕೊಡುವ ಬದಲು, ಹೆಚ್ಚಾಗಿ ಜಿಂದಾಲ್ ಕೈಗಾರಿಕೆಗೆ ನೀಡುತ್ತಾರೆ ಎಂದು ದೂರಿದರು.