ಬಳ್ಳಾರಿ :ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ನಿಮಿತ್ತ ಬಳ್ಳಾರಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿ ಒಂದು ದಿನದ ಮಟ್ಟಿಗೆ ವಿದ್ಯಾರ್ಥಿನಿ ಪುಷ್ಪಲತಾ ವಿಶೇಷ ಗಮನ ಸೆಳೆದಿದ್ದಾರೆ.
ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆದ ವಿದ್ಯಾರ್ಥಿನಿ!
ಬಳ್ಳಾರಿ ಜಿಪಂ ಕಚೇರಿಯ ಸಭಾಂಗಣದಲ್ಲಿಂದು ನಡೆದ ಮಹಿಳೆಯರ ಮತ್ತು ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಪುಷ್ಪಲತಾ, ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು..
ಬಳ್ಳಾರಿ ಜಿಪಂ ಕಚೇರಿಯ ಸಭಾಂಗಣದಲ್ಲಿಂದು ನಡೆದ ಮಹಿಳೆಯರ ಮತ್ತು ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದ ಏಕದಿನದ ಮಟ್ಟಿಗೆ ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದ ಸಿರುಗುಪ್ಪ ತಾಲೂಕಿನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಪುಷ್ಪಲತಾ, ಬಾಲ್ಯ ವಿವಾಹಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸುಲಲಿತವಾಗಿ ಉತ್ತರಿಸಿದ್ರು.
ಇದಲ್ಲದೇ, ವರದಕ್ಷಿಣೆ ಪಡೆಯೋದು ಎಷ್ಟು ಅಪರಾಧವೋ, ವರದಕ್ಷಿಣೆ ನೀಡೋದು ಕೂಡ ಅಷ್ಟೇ ಅಪರಾಧ ಎಂದು ತಿಳಿಸಿದರು. ನನಗೆ ಈ ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆಗಿರೋದು ಬಹಳ ಖುಷಿ ಎನಿಸಿದೆ. ನಾನು ಮುಂದೊಂದು ದಿನ ಸಿಇಒ ಆಗಬೇಕೆಂಬ ಕನಸು ಹೊಂದಿದ್ದೇನೆ. ನನಗೆ ಈ ಅವಕಾಶ ಮಾಡಿಕೊಟ್ಟ ಸಿಇಒ ನಂದಿನಿ ಮೇಡಂ ಅವರಿಗೆ ನಾನು ಅಭಾರಿಯಾಗಿರುವೆ ಎಂದರು.