ಬಳ್ಳಾರಿ: ಜೀವನದಲ್ಲಿ ಮಕ್ಕಳನ್ನು ಐದು 'ಸಿ'ಗಳಾದ ಸೆಲ್‌ಫೋನ್,ಚಾಟಿಂಗ್, ಕೇಬಲ್ ಕಿತ್ತು ಹಾಕಿ, ಕೆಟ್ಟ ಸಿನಿಮಾಗಳು ಮತ್ತು ಕ್ರಿಕೆಟ್ನಿಂದ ದೂರವಿಡಿ ಎಂದು ರಾಜ್ಯ ವಿಜ್ಞಾನ ಪರಿಷತ್ ಉಪಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ಅವರು ಪೋಷಕರಿಗೆ ಕಿವಿ ಮಾತು ಹೇಳಿದ್ರು.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಉತ್ಸವ 2020ರ 2ನೇ ದಿನದ ಕಾರ್ಯಕ್ರಮದಲ್ಲಿ ಕಡಲೆ ಕಾಳುಗಣಪ ವೇದಿಕೆಯಲ್ಲಿ ಡಾ.ಹುಲಿಕಲ್ ನಟರಾಜ್ ಅವರು ಪವಾಡ ಬಯಲು ಮಾಡಿದರು.ಉದಾಹರಣೆಯೊಂದಿಗೆ ಪ್ರವಾಸಿಗರಿಗೆ ವೈಜ್ಞಾನಿಕತೆ ಬೆಳೆಸುವ ಕೆಲಸ ಮಾಡಿದರು. ಪವಾಡಗಳ ಹಿಂದೆ ವೈಜ್ಞಾನಿಕ ಅಂಶಗಳು ಒಳಗೊಂಡಿದೆ ಎಂದು ಪ್ರವಾಸಿಗರಿಗೆ ಮನದಟ್ಟು ಮಾಡಿದರು.
ಕಲೆಯನ್ನು ಉಳಿಸಿಕೊಳ್ಳಬೇಕೆಂದರೆ ವಿಜ್ಞಾನ ಬೇಕು. ಮನಸ್ಸು ಮತ್ತು ಬುದ್ಧಿಗಟ್ಟಿತನವಾಗಬೇಕಾದ್ರೇ ವಿಜ್ಞಾನ, ನಂಬಿಕೆ, ಧರ್ಮ, ಸಂಸ್ಕೃತಿ ಬೇಕು ಎಂದರು. ಧರ್ಮವನ್ನು ಮೂಢನಂಬಿಕೆಯಾಗಿ ಪರಿರ್ವನೆ ಮಾಡುವ ಜನರು ಹೇಗೆಲ್ಲ ಮೋಸ ಮಾಡುತ್ತಾರೆ ಎನ್ನುವುದನ್ನು ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ತಿಳಿ ಹೇಳಿದರು.
ತೆಂಗಿನ ಕಾಯಿಯಿಂದ ಭೂಮಿಯಲ್ಲಿ ನೀರು ಬರುತ್ತದೆ. ಗಾಜುಗಳಲ್ಲಿ ಕುಣಿಯುವುದರಿಂದ ಕಾಲಿಗೆ ಗಾಜು ಚುಚ್ಚುವುದಿಲ್ಲ. ನಿಂಬೆ ಹಣ್ಣು ನೀರಿನಲ್ಲಿ ಕರಗುವುದು ಇನ್ನಿತರ ಪವಾಡಗಳನ್ನು ಪ್ರವಾಸಿಗರ ಮುಂದೆ ವೇದಿಕೆಯ ಮೇಲೆ ಮಾಡಿ ತೋರಿಸಿ, ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನೂ ಹೇಳಿದರು.
ಮಕ್ಕಳು ಐದು 'ಸಿ' ನಿಂದ ದೂರವಿರಬೇಕು: