ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಗ್ಯಾಸ್​ ತುಂಬುವಾಗ ಸಿಲಿಂಡರ್​ ಸ್ಪೋಟ : ಅಂಗಡಿ ಭಸ್ಮ

ಬಳ್ಳಾರಿ ನಗರದ ಬೆಂಗಳೂರು ರಸ್ತೆಯ ಕಟ್ಟಡವೊಂದರಲ್ಲಿ ಎಲ್​ಪಿಜಿ ಸಿಲಿಂಡರ್​ಗಳಿಗೆ ಅಕ್ರಮವಾಗಿ ಗ್ಯಾಸ್​ ತುಂಬುವಾಗ ಸಿಲಿಂಡರ್​ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ.

By

Published : Jun 4, 2020, 11:21 PM IST

Gas cylinder explosion in Bellary
ಅಕ್ರಮವಾಗಿ ಗ್ಯಾಸ್​ ತುಂಬುವಾಗ ಸಿಲಿಂಡರ್​ ಸ್ಪೋಟ

ಬಳ್ಳಾರಿ : ಅಕ್ರಮವಾಗಿ ಗ್ಯಾಸ್​ ತುಂಬುವಾಗ ಸಿಲಿಂಡರ್​ ಸ್ಪೋಟಗೊಂಡ ಘಟನೆ ನಗರದ ಬೆಂಗಳೂರು ರಸ್ತೆಯ ಸಿ.ವೇಣುಗೋಪಾಲ್​ ಎಂಬ ಕಟ್ಟಡದಲ್ಲಿ ನಡೆದಿದೆ.

ದಿನೋಪಯೋಗಿ ವಸ್ತುಗಳ ರಿಪೇರಿ ಕೆಲಸ ಮಾಡುವ ಅಂಗಡಿಯವರು ಅಕ್ರಮ ಮಾರಾಟಕ್ಕಾಗಿ ದೊಡ್ಡ ಎಲ್​ಪಿಜಿ ಸಿಲಿಂಡರ್​ನಿಂದ ಚಿಕ್ಕ ಸಿಲಿಂಡರ್​ಗಳಿಗೆ ಗ್ಯಾಸ್​ ತುಂಬುವಾಗ ಈ ದುರ್ಘಟನೆ ನಡೆದಿದ್ದು, ಪರಿಣಾಮ ಅಂಗಡಿ ಸುಟ್ಟು ಭಸ್ಮವಾಗಿದೆ. ಅಂಗಡಿಯವರು ಸಣ್ಣ ಎಲ್​ಪಿಜಿ ಸಿಲಿಂಡರ್​ಗಳನ್ನು 500 ರಿಂದ 600 ರೂ. ಹಾಗೂ ದೊಡ್ಡದು 1,500 ರೂ. ದರಕ್ಕೆ ಅಕ್ರಮ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಗೊತ್ತಿದ್ದರು ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗ್ಯಾಸ್​ ತುಂಬುವಾಗ ಸಿಲಿಂಡರ್​ ಸ್ಪೋಟ

ಈ ಹಿಂದೆಯೂ ಈ ಅಂಗಡಿಯಲ್ಲಿ ಸಣ್ಣ ಮಟ್ಟದ ಅಗ್ನಿ ದುರಂತ ನಡೆದಿತ್ತು. ಆದರೂ ಬುದ್ಧಿ ಕಲಿಯದ ಮಾಲೀಕರು ಅಕ್ರಮ ಚಟುವಟಿಕೆ ಮುಂದುವರೆಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳದ ಇನ್ಸ್​​ಪೆಕ್ಟರ್​ ಬಸವರಾಜ ಮತ್ತು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ABOUT THE AUTHOR

...view details