ಬಳ್ಳಾರಿ :ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಮಹಿಳೆಯರ ಖಾತೆಗೆ 500 ರೂ. ಜಮೆ ಮಾಡಿದೆ. ಹಣ ಪಡೆದುಕೊಳ್ಳಲು ಫಲಾನುಭವಿಗಳು ನೂಕುನುಗ್ಗಲು ನಡೆಸಿದ ಘಟನೆ ನಗರದಲ್ಲಿ ನಡೆದಿದೆ.
ಗರೀಬ್ ಕಲ್ಯಾಣ ಯೋಜನೆ ಹಣ ಪಡೆಯಲು ಮಹಿಳೆಯರ ನೂಕುನುಗ್ಗಲು.. - ಗರೀಬ್ ಕಲ್ಯಾಣ ಯೋಜನೆ ಹಣ ಪಡೆಯಲು ನೂಲುನುಗ್ಗಲು
ಹಣ ಪಡೆಯುವ ಧಾವಂತದಲ್ಲಿ ಮಹಿಳೆಯರು ಸಾಮಾಜಿಕ ಅಂತರ ಕಾಪಾಡುವುದನ್ನೂ ಮರೆತೂ ನೂಕುನುಗ್ಗಲು ಮಾಡಿದ್ದಾರೆ.

ಮಹಿಳೆಯರು
ಗರೀಬ್ ಕಲ್ಯಾಣ ಯೋಜನೆ ಹಣ ಪಡೆಯಲು ಮುಗಿಬಿದ್ದ ಮಹಿಳೆಯರು..
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಕೇಂದ್ರ ಸರ್ಕಾರ ಪ್ರತಿಯೊಬ್ಬ ಮಹಿಳೆಯ ಬ್ಯಾಂಕ್ ಖಾತೆಗೂ 500 ರೂ. ಜಮೆ ಮಾಡಿದೆ. ಆ ಹಣವನ್ನು ಪಡೆಯಲು ಬ್ಯಾಂಕ್ ಮುಂದೆ ಮಹಿಳೆಯನ್ನು ಸಾಲುಗಟ್ಟಿ ನಿಂತಿದ್ದಾರೆ.
ನಗರದ ಎಪಿಎಂಸಿ ರಸ್ತೆಯಲ್ಲಿರುವ ಬಂಡಿಮೋಟ್ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಯ ನೇತೃತ್ವದಲ್ಲಿ ಸಿಬ್ಬಂದಿ ಮಹಿಳೆಯರ ಬ್ಯಾಂಕ್ ಖಾತೆ ಪುಸ್ತಕ ಮತ್ತು ಆಧಾರ ಕಾರ್ಡ್ ಪರಿಶೀಲನೆ ಮಾಡಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ ಬಂದ 500 ರೂ. ನೀಡಿದ್ದಾರೆ. ಹಣ ಪಡೆಯುವ ಧಾವಂತದಲ್ಲಿ ಮಹಿಳೆಯರು ಸಾಮಾಜಿಕ ಅಂತರ ಕಾಪಾಡುವುದನ್ನೂ ಮರೆತೂ ನೂಕುನುಗ್ಗಲು ಮಾಡಿದ್ದಾರೆ.