ಬಳ್ಳಾರಿ:2020ರ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಪ್ರಯುಕ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯ ಕುಟುಂಬದ ಸದಸ್ಯರಿಗಾಗಿ ಹಾಸ್ಯಕೂಟ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗಂಗಾವತಿ ಪ್ರಾಣೇಶ್ ತಂಡದಿಂದ ಹಾಸ್ಯ ಬಸವರಾಜ್ ಮಹಾಮನಿ ಮತ್ತು ನರಸಿಂಹ ಜೋಷಿ ಅವರು ಸಾರ್ವಜನಿಕ ಜೀವನದಲ್ಲಿ ನಡೆಯುವ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬಸ್ಥರನ್ನು ನಗೆಗಡಲಲ್ಲಿ ತೇಲಿಸಿದ್ರು.
ಬಳ್ಳಾರಿ ಬಿಸಿಲಿಗೆ ಮನುಷ್ಯರೇ ಉಳಿಯುವುದಿಲ್ಲ ಇನ್ನು ಈ ಕೊರೊನಾ ವೈರಸ್ ಎಲ್ಲಿ ಉಳಿಯುತ್ತೆ. ಜನರು ಯಾರೂ ಮಾಸ್ಕ್ ಹಾಕಿರಲಿಲ್ಲ, ಡಾಕ್ಟರ್ಗಳೇ ಮಾಸ್ಕ್ ಹಾಕವುದನ್ನ ಬಿಟ್ಟಿದ್ದಾರೆ ಅಂತಾ ಗಂಗಾವತಿ ಪ್ರಾಣೇಶ್ ಕೊರೊನಾ ಕುರಿತು ಹಾಸ್ಯ ಚಟಾಕಿ ಹಾರಿಸಿದ್ರು. ಉತ್ತರ ಕರ್ನಾಟಕದ ಜನರು ಗಟ್ಟಿ ಜನರು, ಕುರುಗೋಡು ಜಾತ್ರೆ, ಬಳ್ಳಾರಿ ಕೋಟೆ ಮಲ್ಲೇಶ್ವರ ಜಾತ್ರೆ ಎಲ್ಲಾ ಕಡೆ ಜಾತ್ರೆಗಳು ನಡೆಯುತ್ತಿವೆ. ಸಾವಿರಾರು ಜನರು ಮಾಸ್ಕ್ ಇಲ್ಲದೇ ಭಾಗವಹಿಸುತ್ತಿದ್ದಾರೆ. ಯಾರಿಗೂ ಏನು ಆಗಿಲ್ಲ ನೋಡಿ ಎಂದ್ರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಹೆಚ್ಚುವರಿ ಎಸ್ಪಿ ಲಾವಣ್ಯ, ಡಿವೈಎಸ್ಪಿ ಮಹೇಶ್ವರ ಗೌಡ, ಸರ್ದಾರ್ ಇನ್ನಿತರ ಅಧಿಕಾರಿಗಳು, ಸಿಬ್ಬಂದಿಯ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಇದನ್ನೂ ಓದಿ:ಜಾರಕಿಹೊಳಿ ಸಹೋದರರು ಹೇಳಿದ 2+3+4 ಸೂತ್ರ ಏನು ಗೊತ್ತಾ?