ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಗಾಂಧಿ ತತ್ವ ಆಧಾರಿತ ಬೀದಿ ನಾಟಕ ಪ್ರದರ್ಶನ - ಇತ್ತೀಚಿನ ಬಳ್ಳಾರಿ ಸುದ್ದಿ

ಬಳ್ಳಾರಿಯಲ್ಲಿ ಐಎಎಸ್ ವಿನ್ನಿಷರ್ಸ್ ತಂಡದ ಸದಸ್ಯರು ಗಾಂಧಿ ಕುರಿತ ಬೀದಿನಾಟಕ ಮಾಡಿ ಸಾರ್ವಜನಿಕರ ಗಮನ ಸೆಳೆದರು. ನಾಟಕದಲ್ಲಿ ಗಾಂಧಿಯ ಅಹಿಂಸಾ ತತ್ವ, ಮಹಿಳೆಯನ್ನು ಸಮಾಜ ಕಂಡ ರೀತಿ, ಶೌಚಾಲಯದ ಮಹತ್ವ, ಪ್ಲಾಸ್ಟಿಕ್​ ಸಮಸ್ಯೆ, ಸತಿಸಹಗಮನ ಪದ್ಧತಿ ಹೀಗೆ ಹಲವು ಮುಖ್ಯ ವಿಷಯಗಳ ಕುರಿತು ಜನಜಾಗೃತಿ ಮೂಡಿಸಲಾಯಿತು.

Gandi street drama program at ballary

By

Published : Oct 3, 2019, 11:31 AM IST

ಬಳ್ಳಾರಿ: ಗಾಂಧಿ ಯಾರು.. ನಾನು ಗಾಂಧಿ, ನೀನು ಗಾಂಧಿ ಎಂಬ ಸಾಮೂಹಿಕ ನೃತ್ಯ ಪ್ರದರ್ಶನ ಮೂಲಕ ಐಎಎಸ್ ವಿನ್ನಿಷರ್ಸ್ ತಂಡದ ಸದಸ್ಯರು ನಗರದಲ್ಲಿ ಗಮನ ಸೆಳೆದರು.

ಐಎಎಸ್ ವಿನ್ನಿಷರ್ಸ್ ಸಂಸ್ಥೆಯ ಸಂಸ್ಥಾಪಕ ಆರ್.ವಿನಯ ಕುಮಾರ ಮಾತನಾಡಿ, ಗಾಂಧೀಜಿಯವರ ವಿಚಾರಧಾರೆಗಳು ಹಾಗೂ ಅವರ ನಡೆ, ನುಡಿಯ ಕುರಿತು ಸಾರ್ವಜನಿಕರಲ್ಲಿ ಈ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಮೂಲಕ 150ನೇ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸೋದೇ ಇದರ ಮೂಲ ಉದ್ದೇಶವಾಗಿದೆ ಎಂದರು. ಬೀದಿ ನಾಟಕದಲ್ಲಿ ಗೃಹಿಣಿಯ ಪಾತ್ರ ಮಾಡಿದ್ದ ಮೇಘ ಹಿರೇಮಠ ಮಾತನಾಡಿ, ಈ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಅದನ್ನು ಹೋಗಲಾಡಿಸಲು ಇಂಥ ಬೀದಿ ನಾಟಕ ಪ್ರದರ್ಶನವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಗಣಿನಗರಿಯಲ್ಲಿ ಗಾಂಧಿತತ್ವ ಆಧಾರಿತ ಬೀದಿ ನಾಟಕ ಪ್ರದರ್ಶನ

ಈ ಬೀದಿ ನಾಟಕ ಪ್ರದರ್ಶನದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಶ್ವೇತಾ ಅಮರಾವತಿ ಮಾತನಾಡಿ, ಕಸ್ತೂರಬಾ ಅವರೊಂದಿಗಿನ ಗಾಂಧೀಜಿಯವರ ಕಾದಾಟ ಹಾಗೂ ಅವರ ತಪ್ಪಿನ ಅರಿವಾದಾಗ ಪತ್ನಿಯನ್ನು ಪೂಜ್ಯನೀಯ ಭಾವನೆಯಿಂದ ಕಂಡಿರೋದು. ಬಯಲು ಬಹಿರ್ದೆಸೆ ಮುಕ್ತತೆಗೆ ಮನೆಗೊಂದು ಶೌಚಾಲಯ ನಿರ್ಮಾಣದ ಜಾಗೃತಿ. ಪೆಂಡಂಭೂತವಾಗಿ ಕಾಡುವ ಈ ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣದ ಕುರಿತು ಈ ಬೀದಿ ನಾಟಕ ಪ್ರದರ್ಶನದಲ್ಲಿ ಜಾಗೃತಿ ಮೂಡಿಸಲಾಯಿತು ಎಂದರು.

ಇನ್ನು ಈ ಬೀದಿ ನಾಟಕದಲ್ಲಿ ಗಾಂಧಿಯ ಅಹಿಂಸಾ ತತ್ವ, ಮಹಿಳೆಯನ್ನು ಸಮಾಜ ಕಂಡ ರೀತಿ, ಶೌಚಾಲಯದ ಮಹತ್ವ, ಪ್ಲಾಸ್ಟಿಕ್​ ಸಮಸ್ಯೆ, ಸತಿಸಹಗಮನ ಪದ್ಧತಿ ಹೀಗೆ ಹಲವು ಮುಖ್ಯ ವಿಷಯಗಳ ಕುರಿತು ಜನಜಾಗೃತಿ ಮೂಡಿಸಲಾಯಿತು.

ABOUT THE AUTHOR

...view details