ಬಳ್ಳಾರಿ :ನಗರದ ಹೊರವಲಯ ತಾಳೂರು ರಸ್ತೆಯ ಪೀಪಲ್ ಟ್ರೀ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಬಳ್ಳಾರಿಯಲ್ಲಿ 150ನೇ ಗಾಂಧಿ ಜಯಂತಿ.. ವಿವಿಧ ಉಡುಗೆ ತೊಟ್ಟು ಗಮನ ಸೆಳೆದ ಚಿಣ್ಣರು.. - Mahatma Gandhi Jimanti Jayanti at People Tree School, Bellary
ಬಳ್ಳಾರಿ ನಗರದ ಹೊರವಲಯ ತಾಳೂರು ರಸ್ತೆಯ ಪೀಪಲ್ ಟ್ರೀ ಶಾಲೆಯಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ವಿವಿಧ ವೇಷ ಭೂಷಣಗಳನ್ನು ತೊಟ್ಟು ಮಕ್ಕಳು ಗಮನ ಸೆಳೆದರು.
![ಬಳ್ಳಾರಿಯಲ್ಲಿ 150ನೇ ಗಾಂಧಿ ಜಯಂತಿ.. ವಿವಿಧ ಉಡುಗೆ ತೊಟ್ಟು ಗಮನ ಸೆಳೆದ ಚಿಣ್ಣರು.. Gandhiji's 150th birth anniversary in Bellary](https://etvbharatimages.akamaized.net/etvbharat/prod-images/768-512-5539166-thumbnail-3x2-hrs.jpg)
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಮಹಾತ್ಮ ಗಾಂಧೀಜಿಯವರ ಬಾಲ್ಯ, ಚಳವಳಿ, ಹೋರಾಟ ಮತ್ತು ಜೀವನವನ್ನು ಬಿಂಬಿಸುವ ವಿವಿಧ ವೇಷ ಭೂಷಣಗಳನ್ನು ತೊಟ್ಟು ಗಮನಸೆಳೆದರು. ವಿಶೇಷವಾಗಿ ವಿದ್ಯಾರ್ಥಿನಿಯರು ಸೀರೆ ಉಟ್ಟುಕೊಂಡರೆ, ವಿದ್ಯಾರ್ಥಿಗಳು ಪಂಚೆ, ನೆಹರು ಟೋಪಿ ಹಾಕಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಎಲ್ಕೆಜಿಯಿಂದ 10ನೇ ತರಗತಿವರೆಗಿನ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಶಾಲೆಯ ಮುಖ್ಯಸ್ಥ ಜೆ.ಪ್ರಭುರಾಜ್ ಮಾತನಾಡಿ, ಇಂದಿನ ದಿನಗಳಲ್ಲಿ ಗಾಂಧಿಜೀಯವರ ತತ್ವ, ಆದರ್ಶಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಮಕ್ಕಳು ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಅದನ್ನು ಬೆಳೆಸುವ ಕೆಲಸ ಮಾಡಬೇಕು. ಗಾಂಧೀಜಿ ಬಗ್ಗೆ ಪೋಟೋಗಳ ಪ್ರದರ್ಶನ ನಡೆಸಲು ವಿವಿಧ ಪತ್ರಿಕೆ ಮತ್ತು ನಿಯತಕಾಲಿಕೆಗಳ ಮೂಲಕ ಛಾಯಾಚಿತ್ರಗಳನ್ನ ಹುಡುಕಿ ಸಂಗ್ರಹಿಸಲಾಗಿದೆ ಎಂದರು.