ಕರ್ನಾಟಕ

karnataka

ETV Bharat / state

ಬಳ್ಳಾರಿ: ವಿಜೃಂಭಣೆಯಿಂದ ಸಾಗಿದ ಗಾಣಗಟ್ಟೆ ಮಾಯಮ್ಮ ರಥೋತ್ಸವ - ಬಳ್ಳಾರಿ ಇತ್ತೀಚಿನ ಸುದ್ದಿ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಾಣಗಟ್ಟೆ ಗ್ರಾಮದ ಸದಾ ಹಣದ ಅಲಂಕಾರ ದೇವತೆ ಎಂದೇ ಖ್ಯಾತಿ ಹೊಂದಿದ ಗಾಣಗಟ್ಟೆ ಮಾಯಮ್ಮ ದೇವಿ ರಥೋತ್ಸವ ಮಾರ್ಚ್​ 24ರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

Ganagatte Mayamma devi carfest
ಗಾಣಗಟ್ಟೆ ಮಾಯಮ್ಮ ರಥೋತ್ಸವ

By

Published : Mar 25, 2021, 10:46 AM IST

ಬಳ್ಳಾರಿ: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಗಾಣಗಟ್ಟೆ ಗ್ರಾಮದ ಮಾಯಮ್ಮ ದೇವಿ ರಥೋತ್ಸವವು ಮಾರ್ಚ್​ 24ರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಸದಾ ಹಣದ ಅಲಂಕಾರ ದೇವತೆ ಎಂದೇ ಖ್ಯಾತಿ ಹೊಂದಿದ ಗಾಣಗಟ್ಟೆ ಮಾಯಮ್ಮ ದೇವಿ ರಥೋತ್ಸವದಲ್ಲಿ ನೆರೆಯ ಆಂಧ್ರಪ್ರದೇಶ ಸೇರಿದಂತೆ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವ ವೀಕ್ಷಣೆಗೆಂದೇ ಆಗಮಿಸಿದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತು ಪಾದಯಾತ್ರೆ ಮೂಲಕ ಗಾಣಗಟ್ಟೆಗೆ ಆಗಮಿಸಿದ್ದರು.

ಈ ರಥೋತ್ಸವದ ಮುಂಚಿತವಾಗಿ ಮಾಯಮ್ಮದೇವಿ ಮೂರ್ತಿಯನ್ನು ಸಕಲ ವಾದ್ಯಮೇಳಗಳೊಂದಿಗೆ ರಥದ ಬಳಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ತಂದು ಪೂಜಾ ಬಳಗದವರು ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ದೇವಿಯ ಪಟದ ಹರಾಜು ಪ್ರಕ್ರಿಯೆ ನಡೆಯಿತು. ದಾವಣಗೆರೆ ಜಿಲ್ಲೆಯ ಮಲ್ಲಾಪುರದ ತಿಪ್ಪೇಸ್ವಾಮಿ 4,10, 101ರೂ.ಗಳಿಗೆ ಹರಾಜು ಪ್ರಕ್ರಿಯೆಯಲ್ಲಿ ಪಟಾಕಿ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನು ಓದಿ:ರಾಕೇಶ್ ಟಿಕಾಯತ್ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಿ: ಎಚ್​ಡಿಕೆ ಆಗ್ರಹ

ರಾಜ್ಯದಲ್ಲಿ ನಡೆಯುವ ಎಲ್ಲ ರಥೋತ್ಸವವನ್ನ ಭಕ್ತರು ಮಿಣಿ ಮೂಲಕ ಎಳೆದೊಯ್ದರೆ ಈ ಗಾಣಗಟ್ಟೆ ಮಾಯಮ್ಮ ದೇವಿಯ ರಥವನ್ನ ಯಾವುದೇ ಮಿಣಿ ಬಳಸದೇ ಭಕ್ತರೆ ತಳ್ಳುವ ಮೂಲಕ ರಥವನ್ನು ಎಳೆದೊಯ್ದರು. ರಥ ಪಾದಗಟ್ಟೆವರೆಗೆ ಮುಂದುವರೆದು ನಂತರ ಮೂಲ ಸ್ಥಾನಕ್ಕೆ ಬಂದು ತಲುಪಿತು. ರಥ ಸಾಗುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಬಾಳೆಹಣ್ಣು, ಉತ್ತುತ್ತಿ ಎಸೆಯುವ ಮೂಲಕ ದೇವಿ ಮೂರ್ತಿಗೆ ನಮಿಸಿದರು.

ABOUT THE AUTHOR

...view details