ಬಳ್ಳಾರಿ :ನಗರದ ಹೊರ ವಲಯದಲ್ಲಿನ ಮಟ್ಕಾ ಮತ್ತು ಜೂಜು ಅಡ್ಡೆಯ ಮೇಲೆ ಮೇಲೆ ಪ್ರತ್ಯೇಕ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಪ್ರತ್ಯೇಕ ಘಟನೆ: ಬಳ್ಳಾರಿಯಲ್ಲಿ ಮಟ್ಕಾ, ಜೂಜಾಡುತ್ತಿದ್ದ 10 ಮಂದಿ ಬಂಧನ - ಇಸ್ಪೀಟ್ ಮತ್ತು ಮಟ್ಕಾ ಜೂಜಾಟ
ಬಳ್ಳಾರಿ ನಗರದ ಹೊರ ವಲಯದಲ್ಲಿನ ಮಟ್ಕಾ ಮತ್ತು ಜೂಜು ಅಡ್ಡೆಗಳ ಮೇಲೆ ಪ್ರತ್ಯೇಕ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ನಗದು ಹಣ ವಶಕ್ಕೆ ಪಡೆದಿದ್ದಾರೆ.
Gambling in Bellary
ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಜೂಜಿನಲ್ಲಿ ತೊಡಗಿದ್ದ 8 ಮಂದಿಯನ್ನು ಬಂಧಿಸಿದ ಪೊಲೀಸರು, ಸುಮಾರು 12,800 ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದು ಪ್ರಕರಣವು ನಗರದ ಹೊರವಲಯದ ಮುಂಡ್ರಿಗಿ ಪ್ರದೇಶದಲ್ಲಿ ನಡೆದಿದ್ದು, ಮಟ್ಕಾ ಆಡುತ್ತಿದ್ದ ಇಬ್ಬರನ್ನು ಬಂಧಿಸಿ 1,100 ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆ.