ಕರ್ನಾಟಕ

karnataka

ETV Bharat / state

ಆಂಧ್ರಪ್ರದೇಶದ ಆಹೊಬಿಲಂನಲ್ಲಿ ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ದನ ರೆಡ್ಡಿ - Gali Janardhana Reddy visits karnool

ನನ್ನ ಕುಟುಂಬ ಪರಿವಾರದ ಜೊತೆ ನರಸಿಂಹ ಸ್ವಾಮಿಯ ವಿವಿಧ ಅವತಾರಗಳ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದೆ ಎಂದು ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

gali-janardhana-reddy-visits-narasimha-swamy-temple
ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ಧನ ರೆಡ್ಡಿ

By

Published : Aug 26, 2021, 9:25 PM IST

ಬಳ್ಳಾರಿ: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಳ್ಳಗಡ್ಡ ತಾಲೂಕಿನ ಪವಿತ್ರ ಕ್ಷೇತ್ರ ಅಹೊಬಿಲಂ ದೇವಾಲಯಕ್ಕೆ ಗಾಲಿ ಜನಾರ್ದನ ರೆಡ್ಡಿ ಕುಟುಂಬ ತೆರಳಿದೆ. ಅಲ್ಲಿ ನರಸಿಂಹ ಸ್ವಾಮಿಯ ದರ್ಶನವನ್ನು ಪಡೆದುಕೊಂಡಿದೆ.

ಆಂಧ್ರಪ್ರದೇಶದ ಆಹೊಬಿಲಂನಲ್ಲಿ ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ದನ ರೆಡ್ಡಿ

ಪುರಾಣದ ಪ್ರಕಾರ, ಇದು ವಿಷ್ಣು ನರಸಿಂಹಸ್ವಾಮಿಯ ಅವತಾರದಲ್ಲಿ ಭಕ್ತ ಪ್ರಹ್ಲಾದನ ಪ್ರಾರ್ಥನೆಗೆ ಮೆಚ್ಚಿ ಹಿರಣ್ಯಕಶ್ಯಪನನ್ನು ಕೊಂದ ಸ್ಥಳವೆಂದು ಪ್ರಸಿದ್ಧಿ ಪಡೆದಿದೆ. ಅಹೊಬಿಲಂ ಅರಣ್ಯ, ನದಿ, ಬೆಟ್ಟ-ಗುಡ್ಡಗಳ ನಡುವಿನ ಒಂದು ಸುಂದರ ಯಾತ್ರಾಸ್ಥಳವಾಗಿದೆ.

ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ದನ ರೆಡ್ಡಿ

ಇಲ್ಲಿ ನವ ನರಸಿಂಹ ದೇವರ 9 ವಿವಿಧ ರೂಪಗಳ ದೇವಾಲಯಗಳಿವೆ. ಇದೇ ಅರಣ್ಯ ಪ್ರಾಂತ್ಯದ ಬೆಟ್ಟಗಳ ತಪ್ಪಲಿನಲ್ಲಿ ಪಾವನ ನರಸಿಂಹಸ್ವಾಮಿ ದೇವಾಲಯವಿದೆ. ನಾನು, ನನ್ನ ಕುಟುಂಬ ಪರಿವಾರದ ಜೊತೆ ನರಸಿಂಹ ಸ್ವಾಮಿಯ ವಿವಿಧ ಅವತಾರಗಳ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಓದಿ:Mysuru Gangrape Case: ಮುಂದುವರಿದ ಪೊಲೀಸ್​ ತನಿಖೆ, ಮೂವರು ಆರೋಪಿಗಳ ಬಂಧನ?

ABOUT THE AUTHOR

...view details