ಕರ್ನಾಟಕ

karnataka

ETV Bharat / state

ಸಾಂಸ್ಕೃತಿಕ ಉತ್ಸವಕ್ಕೆ 1 ಲಕ್ಷ ಘೋಷಣೆ ಮಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ..! - ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ್ ಬಸವರಾಜ್

ಬಳ್ಳಾರಿ‌ ನಗರದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸಾಂಸ್ಕೃತಿಕ ಉತ್ಸವಕ್ಕೆ 1 ಲಕ್ಷ ಪೋತ್ಸಾಹ ಧನ ನೀಡುವ ಭರವಸೆ ನೀಡಿದರು.

kn_bly_05_060220_VVSculturalnews_ka10007
ಸಾಂಸ್ಕೃತಿಕ ಉತ್ಸವಕ್ಕೆ 1 ಲಕ್ಷ ಘೋಷಣೆ ಮಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ..!

By

Published : Feb 7, 2020, 6:41 AM IST

ಬಳ್ಳಾರಿ:ದೇಶಾಭಿಮಾನ, ಕನ್ನಡದ ಅಭಿಮಾನ, ಅರಣ್ಯ ರಕ್ಷಣೆ, ಕಾಡು ಪ್ರಾಣಿಗಳು ಮತ್ತು ನಾಡು ರಕ್ಷಣೆ ಬಗ್ಗೆ ನೃತ್ಯಗಳನ್ನು ಮಾಡುವ ಮೂಲಕ ವೀರಶೈವ ವಿದ್ಯಾವರ್ಧಕ ಸಂಘದ ಶಾಲೆ ಮತ್ತು ಕಾಲೇಜ್ ನ ವಿದ್ಯಾರ್ಥಿಗಳು ಪ್ರೇಕ್ಷಕರಿಗೆ ಜಾಗೃತಿ ಮೂಡಿಸಿದರು.

ಸಾಂಸ್ಕೃತಿಕ ಉತ್ಸವಕ್ಕೆ 1 ಲಕ್ಷ ಘೋಷಣೆ ಮಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ..!
ಗಣಿನಾಡು ಬಳ್ಳಾರಿ ನಗರದ ಶೆಟ್ಟರ ಗುರುಶಾಂತ ಪ್ರೌಢಶಾಲೆಯ ಆವರಣದಲ್ಲಿ ಎರಡನೇ ದಿನದ ವೀರಶೈವ ವಿದ್ಯಾವರ್ಧಕ ಸಂಘದ ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಜನಪದ, ಭರತನಾಟ್ಯ, ಪುಣ್ಯಕೋಟಿ ನಾಟಕ, ಗೊರವರ ಕುಣಿತ ನೃತ್ಯ ಪ್ರದರ್ಶನ ಮಾಡಿದರು.
ಸಾಂಸ್ಕೃತಿಕ ಉತ್ಸವಕ್ಕೆ 1 ಲಕ್ಷ ಪ್ರೋತ್ಸಾಹ ಧನ :-
ಬಳ್ಳಾರಿ‌ ನಗರದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಸಾಂಸ್ಕೃತಿಕ ಉತ್ಸವಕ್ಕೆ 1 ಲಕ್ಷ ಪೋತ್ಸಾಹ ಧನ ನೀಡುವ ಭರವಸೆ ನೀಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಸಾಂಸ್ಕೃತಿ ಉತ್ಸವಕ್ಕೆ ಶಾಸಕರು ಹಣಕಾಸು ನೀಡುವ ಮೂಲಕ ಕಲೆಗೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಿದರು. ಈ‌ ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ್ ಬಸವರಾಜ್, ಕಾರ್ಯದರ್ಶಿ ಚೋರನೂರು ಟಿ.ಕೊಟ್ರಪ್ಪ, ಮಹೇಶ್ವರ ಸ್ವಾಮಿ ಮತ್ತು ನೂರಾರು ಪ್ರೇಕ್ಷಕರು ಹಾಜರಿದ್ದರು.

For All Latest Updates

TAGGED:

ABOUT THE AUTHOR

...view details