ಕರ್ನಾಟಕ

karnataka

ETV Bharat / state

ಆರೋಗ್ಯ ಅಧಿಕಾರಿ, ಪೊಲೀಸ್ ಸಿಬ್ಬಂದಿಗೆ ಜಿ. ಸೋಮಶೇಖರ್ ರೆಡ್ಡಿ ಕ್ಲಾಸ್ - ಬೆಳ್ಳಾರಿ ಜಿಲ್ಲಾ ಸುದ್ದಿ

ಸ್ವಚ್ಛತೆ ಕಾರ್ಯದ ಕುರಿತಾಗಿ ನಗರದ ಪ್ರತಿ ವಾರ್ಡ್​ಗಳಲ್ಲಿ ಎಷ್ಟು ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ? ಹಾಗೂ ಕಸ ವಿಲೇವಾರಿ ಹೇಗೆ ಮಾಡುತ್ತಿದ್ದೀರಾ? 92 ಜನ ಕಾರ್ಮಿಕರು ಎಲ್ಲಿದ್ದಾರೆ? ಎಂದು ಆರೋಗ್ಯ ಅಧಿಕಾರಿಯನ್ನು ಶಾಸಕರು ಪ್ರಶ್ನಿಸಿದ್ದಾರೆ.

ಶಾಸಕ ಜಿ. ಸೋಮಶೇಖರ್​ ರೆಡ್ಡಿ

By

Published : Oct 6, 2019, 1:05 PM IST

ಬಳ್ಳಾರಿ :ಇಂದು ಬೆಳಿಗ್ಗೆ 5 ಗಂಟೆಯಿಂದ 8 ಗಂಟೆಯವರೆಗೆ ಶಾಸಕ ಜಿ. ಸೋಮಶೇಖರ್ ರೆಡ್ಡಿ ನಗರದ ಸ್ವಚ್ಛತೆ ಕುರಿತಂತೆ ನಗರ ಪ್ರದಕ್ಷಿಣೆ ಹಾಕಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರ ಕಾರ್ಯವೈಖರಿ ವೀಕ್ಷಿಸಿದರು.

ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಜಿ. ಸೋಮಶೇಖರ್​ ರೆಡ್ಡಿ, ಜನರ ಕುಂದು ಕೊರತೆಗಳನ್ನು ಆಲಿಸಿ ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿದರು. ಸ್ವಚ್ಛತೆ ಕಾರ್ಯದ ಕುರಿತಾಗಿ ನಗರದ ಪ್ರತಿ ವಾರ್ಡ್​ಗಳಲ್ಲಿ ಎಷ್ಟು ಜನ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ? ಕಸ ವಿಲೇವಾರಿ ಹೇಗೆ ಮಾಡುತ್ತಿದ್ದಿರಾ? 92 ಜನ ಕಾರ್ಮಿಕರು ಎಲ್ಲಿದ್ದಾರೆ? ಎಂದು ಆರೋಗ್ಯ ಅಧಿಕಾರಿ ಹನುಮಂತಪ್ಪರವರಿಗೆ ಪ್ರಶ್ನೆ ಮಾಡಿದರು.

ಶಾಸಕ ಜಿ. ಸೋಮಶೇಖರ್​ ರೆಡ್ಡಿ ನಗರ ಪ್ರದಕ್ಷಿಣೆ

ಪೊಲೀಸ್ ಸಿಬ್ಬಂದಿಗೆ ಕ್ಲಾಸ್

ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಹೊರಕರೆದ ಶಾಸಕರು,ಬೆಂಗಳೂರಿಗೆ ತೆರಳುವ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಲಾರಿ, ಬಸ್ ಹಾಗೂ ಭಾರಿ ವಾಹನಗಳನ್ನು ನಿಲ್ಲಿಸದಂತೆ ಸೂಚನೆ ನೀಡಿದರು. ಈ ರೀತಿಯಾಗಿ ರಸ್ತೆಗಳ ಮೇಲೆ ವಾಹನಗಳು ನಿಲ್ಲಿಸಿದ್ದರಿಂದ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡಲು ತೊಂದರೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಮೌತ್ಕರ್ ಶ್ರೀನಿವಾಸ್ ರೆಡ್ಡಿ, ಮಲ್ಲನಗೌಡ, ವೀರಶೇಖರ್ ರೆಡ್ಡಿ ಶಾಸಕರ ಜೊತೆಗೆ ಹಾಜರಿದ್ದರು. ‌

ABOUT THE AUTHOR

...view details