ಕರ್ನಾಟಕ

karnataka

ETV Bharat / state

ಶವಗಳನ್ನು ಗುಂಡಿಗೆಸೆಯುವ ದೃಶ್ಯ! ಸೋಂಕಿತರಿಗೆ ಗೌರವಯುತ ಅಂತ್ಯಕ್ರಿಯೆ ಏಕಿಲ್ಲ? - ಕೊರೊನಾ ಸೋಂಕಿತರ ಶವ ಸಂಸ್ಕಾರದ ವಿಡಿಯೋ ವೈರಲ್

ಕನಿಷ್ಠ ಗೌರವವೂ ಇಲ್ಲದೆ ಕೊರೊನಾ ಸೋಂಕಿತರ ಮೃತದೇಹಗಳನ್ನು ಗುಂಡಿಗೆ ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Funeral video of Corona infected Viral
ಕೊರೊನಾ ಸೋಂಕಿತರ ಶವ ಸಂಸ್ಕಾರದ ವಿಡಿಯೋ ವೈರಲ್

By

Published : Jun 30, 2020, 11:04 AM IST

Updated : Jun 30, 2020, 11:26 AM IST

ಬಳ್ಳಾರಿ : ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋದಲ್ಲಿ ಮೃತದೇಹಗಳನ್ನು‌ ಕಪ್ಪು ಬಣ್ಣದ ಬ್ಯಾಗ್​ನೊಳಗೆ ತುಂಬಿ ದೊಡ್ಡದಾದ ಗುಂಡಿಗೆ ಎಸೆಯಲಾಗುತ್ತಿದೆ. ಮೃತದೇಹಗಳನ್ನು ಕನಿಷ್ಠ ಗೌರವವೂ ಇಲ್ಲದೆ ಈ ರೀತಿ ಎಸೆಯುತ್ತಿರುವುದು ಎಷ್ಟು ಸರಿ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.

ಕೊರೊನಾ ಸೋಂಕಿತರ ಶವ ಸಂಸ್ಕಾರದ ವಿಡಿಯೋ ವೈರಲ್

ವಿಡಿಯೋ ಬಳ್ಳಾರಿಯದ್ದೇ? ಅಥವಾ ಬೇರೆಡೆಯದ್ದೇ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕಿದೆ. ವಿಡಿಯೋದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುತ್ತಿರುವುದು ಕೇಳಿಬರುತ್ತಿದೆ.

ಈ ಬಗ್ಗೆ ನಮ್ಮ ಪ್ರತಿನಿಧಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್, ಇದು ಜಿಲ್ಲೆಯದ್ದಾಗಿರಲಿಕ್ಕಿಲ್ಲ. ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Last Updated : Jun 30, 2020, 11:26 AM IST

ABOUT THE AUTHOR

...view details