ವಿಜಯನಗರ :ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ಶಂಕರ ಆನಂದ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ನಲ್ಲಿ ಹಣದ ಅವ್ಯವಹಾರ ನಡೆದಿದೆ. ಕಾಲೇಜಿಗೆ ಸಂಬಂಧಿಸಿ ವಿವಿಧ ಬ್ಯಾಂಕ್ಗಳ 16 ಖಾತೆಗಳಲ್ಲಿ ಅಂದಾಜು 3 ಕೋಟಿ ತೆಗೆಯಲಾಗಿದೆ. ಈ ಹಿಂದೆ ಇದ್ದ ಪ್ರಾಂಶುಪಾಲರು ಹಣ ದುರ್ಬಳಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪ್ರಾಂಶುಪಾಲರಾದ ನಟರಾಜ್ ಪಾಟೀಲ್ ಅವರು ಮಾತನಾಡಿರುವುದು.. ಕಳೆದ 8 ವರ್ಷಗಳಿಂದ ಪೊ. ಬಿ ಜಿ ಕನಕೇಶಮೂರ್ತಿ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, 2022ರ ಏಪ್ರಿಲ್ 30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. ಮೇ 1ರಂದು ನಟರಾಜ್ ಪಾಟೀಲ್ ಎನ್ನುವ ಹೊಸ ಪ್ರಾಂಶುಪಾಲರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ಸ್ವೀಕಾರ ಮಾಡುವಾಗ ಹಣದ ಬಗ್ಗೆ ಪರಿಶೀಲಿಸಿದಾಗ ಹಣದ ಗೋಲ್‌ಮಾಲ್ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಕಾಲೇಜಿನ ವಿವಿಧ 16 ಅಕೌಂಟ್ಗಳಲ್ಲಿ ಮೂರು ಕೋಟಿಯಷ್ಟು ಹಣವಿತ್ತಂತೆ. ಆದರೆ, ಇದೀಗ ಇದು ಇಲ್ಲ ಎನ್ನಲಾಗ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಎಲ್ಲವನ್ನು ಅಭಿವೃದ್ಧಿಗಾಗಿ ಬಳಸಿದ್ದೇನೆ ಎನ್ನುತ್ತಿದ್ದಾರಂತೆ. ಹಳೆ ಪ್ರಾಂಶುಪಾಲ ಕನಕೇಶ್‌ಮೂರ್ತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ, ಹಣದ ವಹಿವಾಟಿನ ಅನುಮಾನ ಹೆಚ್ಚಾಗಿದೆ.
ಅಲ್ಲದೇ, ಯಾವುದೇ ಹಣ ಅಭಿವೃದ್ಧಿಗೆ ಬಳಸಬೇಕಾದ್ರೆ ಅದನ್ನು ಆಡಳಿತ ಮಂಡಳಿ ಗಮನಕ್ಕೆ ತರಬೇಕು. ಆದರೆ, ನಿಯಮ ಗಾಳಿಗೆ ತೂರಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಯಿತು ಎನ್ನಲಾಗಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ ಈ ಹಣ ಎಲ್ಲೆಲ್ಲಿ ಖರ್ಚು ಮಾಡಲಾಗಿದೆ. ಯಾವ ಉದ್ದೇಶಕ್ಕೆ ಬಿಡಿಸಲಾಗಿದೆ ಎಂಬುದು ಸ್ಪಷ್ಟವಾಗಬೇಕಾದ್ರೆ ಆಡಿಟ್ ಮಾಡಿದ್ರೆ ಮಾತ್ರ ಸತ್ಯಾಸತ್ಯತೆ ಹೊರ ಬೀಳುತ್ತದೆ ಎಂದು ಕಾಲೇಜಿನ ಪ್ರಾಚಾರ್ಯ ನಟರಾಜ ಪಾಟೀಲ್ ತಿಳಿಸಿದ್ದಾರೆ.
ಓದಿ:ಕಾಂಗ್ರೆಸ್ ದಲಿತರಿಗೆ ಸಿಎಂ ಆಗುವ ಅವಕಾಶ ಕೊಡುತ್ತೆ: ಸಿದ್ದರಾಮಯ್ಯ ಭೇಟಿ ಬಳಿಕ ಪರಮೇಶ್ವರ್ ಆಶಾಭಾವ