ಕರ್ನಾಟಕ

karnataka

ETV Bharat / state

ಮಿಂಚೇರಿ ಗುಡ್ಡದಲ್ಲಿ ಮೂಲಸೌಕರ್ಯ: 4 ಕೋಟಿ ರೂ.ಮಂಜೂರು ಮಾಡಲು ಸಚಿವ ಆನಂದ್​ ಸಿಂಗ್ ಸೂಚನೆ - ಮಿಂಚೇರಿ ಗುಡ್ಡಕ್ಕೆ ಮೂಲಭೂತ ಸೌಕರ್ಯಕ್ಕೆ ಬೇಡಿಕೆ

ಬಳ್ಳಾರಿ ಜಿಲ್ಲೆಯ ಮಿಂಚೇರಿ ಗುಡ್ಡಕ್ಕೆ ಮೂಲಭೂತ ಸವಲತ್ತುಗಳನ್ನು ಒದಗಿಸಲು ಅರಣ್ಯ ಇಲಾಖೆಯಿಂದ ಬುಡಾಗೆ 4 ಕೋಟಿ ರೂ.ಗಳ ಅನುದಾನ ನೀಡುವಂತೆ ಅರಣ್ಯ, ಜೀವಶಾಸ್ತ್ರ, ಪರಿಸರ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಸೂಚನೆ ನೀಡಿದ್ದಾರೆ.

bellary mincheri hills
ಮಿಂಚೇರಿ ಗುಡ್ಡ

By

Published : Dec 9, 2020, 7:09 AM IST

ಬಳ್ಳಾರಿ : ಜಿಲ್ಲೆಯ ಮಿಂಚೇರಿ ಗುಡ್ಡದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆಯಿಂದ ಬುಡಾಗೆ 4 ಕೋಟಿ ರೂ.ಗಳ ಅನುದಾನ ಮಂಜೂರು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್, ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.

ಮಿಂಚೇರಿ ಗುಡ್ಡ
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಮಿಂಚೇರಿ ಗುಡ್ಡದಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿರುವ 16 ವಿಶ್ರಾಂತಿ ಕೋಣೆಗಳ ಕಟ್ಟಡ ಹಾಗೂ ಕುದುರೆ ಕೊಟ್ಟಿಗೆ ಸರಿಯಾದ ನಿರ್ವಹಣೆ ಇಲ್ಲದೆ ದುರಸ್ತಿಗೆ ಬಂದಿವೆ. ಈ ಪ್ರವಾಸಿ ತಾಣಕ್ಕೆ ವೀಕೆಂಡ್ ವೇಳೆ ಸಾವಿರಾರು ಚಾರಣಿಗರು ಟ್ರೆಕ್ಕಿಂಗ್​ ಮಾಡುತ್ತಾರೆ. ಇಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ದೀಪಗಳು, ವಿಶ್ರಾಂತಿ ಕೊಠಡಿ, ಪರಗೋಲುಗಳಿಗೆ ವಿದ್ಯುತ್ ದೀಪ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸುವುದು ಅಗತ್ಯವಿದೆ. ಹೀಗಾಗಿ 5 ಕೋಟಿ ರೂ. ತಮ್ಮ ಇಲಾಖೆಯಿಂದ ಬುಡಾಗೆ ಒದಗಿಸುವಂತೆ ಕೋರಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸಚಿವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದರು. ಮನವಿಯನ್ನು ಆಲಿಸಿದ ಸಚಿವ ಆನಂದ್​​ ಸಿಂಗ್ ಅನುದಾನ ಮಂಜೂರು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಮಿಂಚೇರಿ ಗುಡ್ಡ

ABOUT THE AUTHOR

...view details