ಬಳ್ಳಾರಿ: ಒಲಿಂಪಿಕ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲ ಕ್ರೀಡಾಪಟುಗಳ ಮನೆಗಳಿಗೆ ಉಚಿತವಾಗಿ ಪೇಂಟಿಂಗ್ ಮಾಡುವ ಉದ್ದೇಶದಿಂದ ʼಸುಂದರ್ ಭಾರತ್ʼ ಕಾರ್ಯಕ್ರಮಕ್ಕೆ ಜೆಎಸ್ಡಬ್ಲ್ಯೂ ಪೇಂಟ್ಸ್ ಚಾಲನೆ ನೀಡಿದೆ.
1947 ರಿಂದ ಭಾರತವನ್ನು ಒಲಿಂಪಿಕ್ನಲ್ಲಿ ಪ್ರತಿನಿಧಿಸಿದ ಎಲ್ಲ ಕ್ರಿಡಾಪಟುಗಳ ಮನೆಗಳಿಗೆ ಜೆಎಸ್ಡಬ್ಲ್ಯೂ ಪೇಂಟ್ಸ್ ಸಂಸ್ಥೆ ಉಚಿತವಾಗಿ ಪೇಂಟಿಂಗ್ ಮಾಡಲಿದೆ. ಜೆಎಸ್ಡಬ್ಲ್ಯೂ ಪೇಂಟ್ಸ್ ಸಂಸ್ಥೆಯು ಪರಿಸರ ಸ್ನೇಹಿ ಪೇಂಟ್ಸ್ ಉತ್ಪಾದಕ ಸಂಸ್ಥೆ ಹಾಗೂ 13 ಶತಕೋಟಿ ಯುಎಸ್ ಡಾಲರ್ ಮೌಲ್ಯವನ್ನು ಹೊಂದಿದ್ದು, ಜೆಎಸ್ಡಬ್ಲ್ಯೂ ಗ್ರೂಪ್‌ನ ಅಂಗ ಸಂಸ್ಥೆಯಾಗಿದೆ.