ಕರ್ನಾಟಕ

karnataka

ETV Bharat / state

ವಿಮ್ಸ್ ಆವರಣದಲ್ಲಿ 'ಗೆಳೆಯರ ಬಳಗ'ದಿಂದ ಉಚಿತ ಆಹಾರ ವಿತರಣೆ - Free Food Delivery from Gelayara balaga at Wims Campus

ಈ ಹಿಂದೆ ಇದೇ ಒಪಿಡಿ ಆವರಣದಲ್ಲಿ 13 ದಿನಗಳ ಕಾಲ ಲಾಕ್​ಡೌನ್​ ಮಾಡಿದ ಸಂದರ್ಭದಲ್ಲಿ 500 ಜನರಿಗೆ ಪ್ರತಿದಿನ ಊಟ, ಹಣ್ಣು ವಿತರಣೆ ಮಾಡಿದ್ದರು..

free-food-delivery-from-gelayara-balaga-at-vims-campus
ವಿಮ್ಸ್ ಆವರಣದಲ್ಲಿ 'ಗೆಳೆಯರ ಬಳಗ'ದಿಂದ ಉಚಿತ ಆಹಾರ ವಿತರಣೆ

By

Published : May 9, 2021, 5:08 PM IST

ಬಳ್ಳಾರಿ : ಕೋವಿಡ್-19 ಎರಡನೇ ಅಲೆಯಿಂದ ನಗರದ ಒಪಿಡಿ ಆಸ್ಪತ್ರೆಯಲ್ಲಿ ತುಂಬಾ ಜನ ಹಸಿವಿನಿಂದ ಬಳಲುತ್ತಿದ್ದಾರೆ‌. ಹೀಗಾಗಿ, ಗೆಳೆಯರ ಬಳಗದ ನೇತೃತ್ವದಲ್ಲಿ ಬಡ ಜನರಿಗೆ, ರೋಗಿಯ ಸಹಾಯಕರಿಗೆ ಉಚಿತ ಊಟ, ನೀರು ಮತ್ತು ಹಣ್ಣು ವಿತರಣೆ ಮಾಡಲಾಯಿತು.

ನಗರದ ವಿಮ್ಸ್ ಆವರಣದಲ್ಲಿರುವ ಹಸಿದವರಿಗೆ ಮಧ್ಯಾಹ್ನದ ಊಟ, ಹಣ್ಣುಗಳನ್ನು ಲಾಕ್​ಡೌನ್​ ಮುಗಿಯುವವರೆಗೆ (ಅಂದರೆ ನಾಳೆಯಿಂದ ದಿನಾಂಕ 08-05-2021ರಿಂದ 24-05-2021ರವರೆಗೆ) ಸ್ನೇಹಿತರ ಸಹಕಾರದೊಂದಿಗೆ ವಿತರಿಸಲಾಗುತ್ತದೆ ಎಂದು ತಂಡದ ಸದಸ್ಯರೊಬ್ಬರು ತಿಳಿಸಿದರು.

ವಿಮ್ಸ್ ಆವರಣದಲ್ಲಿ 'ಗೆಳೆಯರ ಬಳಗ'ದಿಂದ ಉಚಿತ ಆಹಾರ ವಿತರಣೆ..

ಈ ಹಿಂದೆ ಇದೇ ಒಪಿಡಿ ಆವರಣದಲ್ಲಿ 13 ದಿನಗಳ ಕಾಲ ಲಾಕ್​ಡೌನ್​ ಮಾಡಿದ ಸಂದರ್ಭದಲ್ಲಿ 500 ಜನರಿಗೆ ಪ್ರತಿದಿನ ಊಟ, ಹಣ್ಣು ವಿತರಣೆ ಮಾಡಿದ್ದರು.

ಈ ಸಮಯದಲ್ಲಿ ಗೆಳೆಯರ ಬಳಗದ ಸ್ನೇಹಿತರಾದ ಓಂ ಪ್ರಕಾಶ್, ಗೋವಿಂದರೆಡ್ಡಿ, ಅಜಯ್, ನಾಗರಾಜ್, ಹಿತೇಶ್, ಸಾಯಿ, ರಾಜು, ರುದ್ರ, ರಾಮು ಮತ್ತು ಧನಶೇಖರ್ ಮತ್ತಿತರರಿದ್ದರು.

ಓದಿ:ಸಿಎಂ ಬಿಎಸ್​ವೈಗೆ ಕರೆ ಮಾಡಿ ಕೋವಿಡ್ ಪರಿಸ್ಥಿತಿಯ ಮಾಹಿತಿ ಪಡೆದ ಪ್ರಧಾನಿ

ABOUT THE AUTHOR

...view details