ಕರ್ನಾಟಕ

karnataka

ETV Bharat / state

ಸಾರಾಯಿ ಗಲಾಟೆ: ಮಾರಾಟಗಾರನ ಕೊಲೆ ಮಾಡಿದ ಆರೋಪಿ ಬಂಧನ! - Bellary news

2005 ನೇ ಸಾರಾಯಿ ಇಸ್ವಿಯಲ್ಲಿ ಮಾರಾಟದಲ್ಲಿ ಗಲಾಟೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡ್ಮೂರು ಮಂಡಲದ ನಿವಾಸಿಯನ್ನು ಕೊಲೆ ಮಾಡಿದ ಆರೋಪದಡಿ ನಾಲ್ಕನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

murder case at Bellary
ಸಾರಾಯಿ ಮಾರಾಟದ ಗಲಾಟೆ: ಮಾರಾಟಗಾರನ ಕೊಲೆಗೈದ ಆರೋಪಿ ಬಂಧನ!

By

Published : Dec 6, 2019, 2:05 PM IST

ಬಳ್ಳಾರಿ: ಸಾರಾಯಿ ಮಾರಾಟದಲ್ಲಿ ಗಲಾಟೆ ಹಿನ್ನೆಲೆಯಲ್ಲಿ ನೆರೆಯ ಆಂಧ್ರಪ್ರದೇಶ ಮೂಲದ ವ್ಯಕ್ತಿಯನ್ನು ಕೊಲೆಗೈದು ಮೃತದೇಹವನ್ನು ದಹನ ಮಾಡಿದ ಆರೋಪದಡಿ ನಾಲ್ಕನೇ ಆರೋಪಿಯನ್ನು ಬಂಧಿಸುವಲ್ಲಿ ಮೋಕಾ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೋಕಾ ಪೊಲೀಸ್ ಠಾಣೆಯ ಸಬ್​ಇನ್ಸ್​​ಪೆಕ್ಟರ್​​ ಭರತ್ ಹಾಗೂ ಸಿಬ್ಬಂದಿ ರಮೇಶ, ಸುರೇಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಗಡಿಗ್ರಾಮವಾದ ಛತ್ರಗುಡಿಯಲ್ಲಿ ನೆಲೆಸಿದ್ದ ನಾಲ್ಕನೇಯ ಆರೋಪಿ ಎರಕುಲ ನಾಗರಾಜ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಿ‌ನ್ನೆಲೆ:2005 ನೇ ಇಸ್ವಿಯಲ್ಲಿ ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡ್ಮೂರು ಮಂಡಲದ ನಿವಾಸಿ ಈಡಿಗರ ದತ್ತಗಿರಿಗೌಡ ಎಂಬಾತನೊಂದಿಗೆ ಸಾರಾಯಿ ಮಾರಾಟದಲ್ಲಿ ತೊಡಗಿಕೊಂಡಿದ್ದ ಈ ನಾಲ್ಕು ಮಂದಿ ಆರೋಪಿತರು ವ್ಯವಹಾರದಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಸಾರಾಯಿ‌ ಮಾರಾಟಗಾರರನ್ನ ಅನುಮಾನಾಸ್ಪದವಾಗಿ ಅಪಹರಿಸಿ ಬಳ್ಳಾರಿ ತಾಲೂಕಿನ ಗಡಿಭಾಗದ ಗ್ರಾಮ ಜಾಲಿಹಾಳ್ ಸಮೀಪ ಕರೆತಂದು ಆತನನ್ನ ಮಾರಕಾಸ್ತ್ರಗಳಿಂದ ಹಲ್ಲೆನಡೆಸಿ ಕೊಲೆಗೈದು, ಮೃತದೇಹವನ್ನು ಬೆಂಕಿಯಲಿ ದಹನ ಮಾಡುತ್ತಾರೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಕೊಲೆಯಾದ ಶಂಕೆ ಪ್ರಕರಣ ದಾಖಲಾಗಿತ್ತು.‌ 2005ರಲ್ಲೇ ಪ್ರಕರಣ ಪ್ರಮುಖ ರೂವಾರಿಗಳಾದ ಪಿಂಜಾರ್ ದಸ್ತಗಿರಿ ಹಾಗೂ ಹರಿಜನ ಜಾನ್ ಎಂಬುವವರನ್ನು ಬಂಧಿಸಿದ್ದ ಪೊಲೀಸರು ಇಬ್ಬರು ಆರೋಪಿಗಳು ತಲೆಮರೆಸಿ ಕೊಂಡಿದ್ದರಿಂದ ಕಾರ್ಯಾಚರಣೆ ಮುಂದುವರಿಸಿದ್ದರು. ಮೂರನೇ ಆರೋಪಿ ಎರಕುಲ ಮಾರೆಪ್ಪ ಎಂಬಾತನನು 2011 ನೇಯ ಇಸವಿ ಯಲ್ಲೇ ಕೊಲೆಗೀಡಾಗಿ ಸಾವನ್ನಪ್ಪಿದನು. ನಾಲ್ಕನೇಯ ಆರೋಪಿ ಎರಕುಲ ನಾಗರಾಜ ಎಂಬಾತನು‌ ಈಗ ಪೊಲೀಸರ ಅತಿಥಿಯಾಗಿ ಜೈಲು ಕಂಬಿ ಎಣಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ABOUT THE AUTHOR

...view details