ಬಳ್ಳಾರಿ:ನಗರದ ಮಿಲ್ಲರ್ ಪೇಟೆಯ ಕಣೇಕಲ್ ಬಸ್ ನಿಲ್ದಾಣದ ಬಳಿ ಸೋಮವಾರ ಯುವಕನೊಬ್ಬನನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಬಳ್ಳಾರಿ ಯುವಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ - ಬಳ್ಳಾರಿ ಯುವಕನ ಕೊಲೆ ಪ್ರಕರಣ
ಬಳ್ಳಾರಿ ನಗರದ ಮಿಲ್ಲರ್ ಪೇಟೆಯ ಕಣೇಕಲ್ ಬಸ್ ನಿಲ್ದಾಣದ ಬಳಿ ನಡೆದ ಯುವಕನ ಕೊಲೆ ಪ್ರಕರಣ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
![ಬಳ್ಳಾರಿ ಯುವಕನ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ ಬಂಧಿತ ಆರೋಪಿಗಳು](https://etvbharatimages.akamaized.net/etvbharat/prod-images/768-512-11642000-888-11642000-1620144393581.jpg)
ಬಂಧಿತ ಆರೋಪಿಗಳು
ಜೀನ್ಸ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇಸ್ಮಾಯಿಲ್ (19) ನನ್ನು ಸೋಮವಾರ ಬೆಳಗಿನ ಜಾವ ಕೊಲೆ ಮಾಡಲಾಗಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬ್ರೂಸ್ ಪೇಟೆ ಪೊಲೀಸರು ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರೈಸ್‌ಮಿಲ್‌ನಲ್ಲಿ ಫಿಟ್ಟರ್ ಕೆಲಸ ಮಾಡ್ತಿದ್ದ ನಗರದ ಕಾಸಿಂ (20) ಮಿಲ್ಲರ್ ಪೇಟೆ, ತುಕಾರಾಮ (21) ಹಮಾಲಿ ಮಿಲ್ಲರ್‌ಪೇಟೆ, ಮಹಬೂಬ್ (24) ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬೈಪಾಸ್ ರಸ್ತೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated : May 4, 2021, 9:42 PM IST