ಬಳ್ಳಾರಿ:ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಯಾವುದೋ ಮಾವಿನ ತೋಟದಲ್ಲಿ ಮಾವಿನ ಮರವೇರಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ಫುಲ್ ವೈರಲ್ ಆಗಿದೆ.
ಮಾವಿನ ಮರವೇರಿದ ಗಾಲಿ ಜನಾರ್ದನ ರೆಡ್ಡಿ... ವಿಡಿಯೋ ವೈರಲ್ - undefined
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಾವಿನ ತೋಟವೊಂದರಲ್ಲಿ ಮಾವಿನ ಕಾಯಿ ಕೀಳಲು ಹರಸಾಹಸ ಪಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ತಮ್ಮ ಎರಡೂ ಕಾಲುಗಳನ್ನು ಮಾವಿನ ಮರದ ಕೊಂಬೆಗಳ ಮೇಲೆ ತ್ರಿಕೋನಾಕಾರದಲ್ಲಿಟ್ಟು ಹಿಂದಿನಿಂದ ಮರದ ಮೇಲಿನ ಕೊಂಬೆಯನ್ನ ಹಿಡಿಯುತ್ತಾರೆ. ಅದೇ ಕೊಂಬೆಯ ಆಸರೆಯಿಂದ ಎರಡು ಕೈಗಳ ಸಹಾಯದೊಂದಿಗೆ ಮೇಲೆದ್ದು, ಸ್ವಲ್ವ ಮುಂದುಗಡೆ ಬಂದು ಕೊಂಬೆಯೊಂದರಲ್ಲಿದ್ದ ಮಾವಿನ ಕಾಯಿ ಕೀಳುತ್ತಾರೆ. ನಂತರ ನಿಧಾನವಾಗಿ ತ್ರಿಕೋನಾಕಾರದ ಕೊಂಬೆಯತ್ತ ರೆಡ್ಡಿ ಧಾವಿಸಿ, ಕೆಳಗಡೆ ನಿಂತಿದ್ದ ತಮ್ಮ ಪತ್ನಿ ಅರುಣಾಲಕ್ಷ್ಮಿಯವರ ಕೈಗೆ ಮಾವಿನ ಕಾಯಿಯನ್ನು ಕೊಡುವ ಮುಖೇನ ನಸುನಗುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರು ಮಾವಿನ ಮರ ಏರಿರುವುದು ಎಲ್ಲಿ? ಯಾವಾಗ? ಎಂಬುದು ಮಾತ್ರ ನಿಗೂಢವಾಗಿದೆ. ನಾಡಿದ್ದು ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಹೊಸ್ತಿಲಲ್ಲಿ ರೆಡ್ಡಿ ಮಾತ್ರ ರಾಜಕಾರಣವನ್ನೇ ಮರೆತು ಹಾಯಾಗಿ ತೋಟದಲ್ಲಿ ಮಾವಿನ ಮರ ಏರುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.