ಬಳ್ಳಾರಿ: ಹಳೆಯ ಕಹಿ ನೆನಪುಗಳನ್ನು ಮೆಲುಕು ಹಾಕುವುದಕ್ಕೆ ನಾನು ಹೋಗೋದಿಲ್ಲ. ಜನ ಬಯಸಿದ್ರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಿಳಿಸಿದರು.
ನಾನು ಯಾರಿಗೂ ಬೇಡವಾದ ಶಿಶುವಾದೆ ಅನ್ನಿಸುತ್ತಿದೆ: ಅನುಪಮಾ ಶೆಣೈ ಬೇಸರ
ಹಳೆಯ ಕಹಿ ನೆನಪುಗಳನ್ನು ಮೆಲುಕು ಹಾಕುವುದಕ್ಕೆ ನಾನು ಹೋಗೋದಿಲ್ಲ. ಅದನ್ನು ಆದಷ್ಟು ಮರೆಯಲು ಪ್ರಯತ್ನಿಸುವೆ. ಆದ್ರೆ, ನಾನು ಯಾರಿಗೂ ಬೇಡವಾದ ಶಿಶು ಆದ್ನೇನೋ ಅನ್ನಿಸುತ್ತಿದೆ ಎಂದು ಅನುಪಮಾ ಶೆಣೈ ಬೇಸರ ವ್ಯಕ್ತಪಡಿಸಿದರು.
ನಾನು ಯಾರಿಗೂ ಬೇಡವಾದ ಶಿಶು ಆದೆ: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಕಣ್ಣೀರು!
ಬಳ್ಳಾರಿ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ನಾನು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವೆ. ರಾಜಕೀಯ ಪಕ್ಷವೊಂದನ್ನು ಕಟ್ಟಲು ಮುಂದಾಗಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಆರ್ಥಿಕವಾಗಿ ಅಶಕ್ತನಾಗಿರುವೆ. ಆದ್ರೂ ಜನರು ಬಯಸಿದ್ರೆ ಖಂಡಿತವಾಗಿಯೂ ಸ್ಪರ್ಧಿಸಲು ಇಷ್ಟಪಡುವೆ ಎಂದು ಶೆಣೈ ತಿಳಿಸಿದರು.