ಬಳ್ಳಾರಿ :ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮ ಹೊರವಲಯದ ಹೊಲದಲ್ಲಿನ ಮರವೊಂದಕ್ಕೆ ರೈತನೊಬ್ಬನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ನಿಲ್ಲದ ರೈತರ ಆತ್ಮಹತ್ಯೆ...ಕುರುಗೋಡಿನಲ್ಲಿ ಅನ್ನದಾತ ನೇಣಿಗೆ ಶರಣು
ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮ ಹೊರವಲಯದಲ್ಲಿರುವ ಹೊಲದಲ್ಲಿನ ಮರವೊಂದಕ್ಕೆ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದೊಂದು ವಾರದ ಹಿಂದೆಯಷ್ಟೇ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಬಾದನಹಟ್ಟಿ ಗ್ರಾಮದ ಬಂಡಿ ಹುಲುಗಪ್ಪ (51) ಎಂಬುವರು ಆತ್ಮಹತ್ಯೆಗೆ ಶರಣಾದ ರೈತ ಎಂದು ಗುರುತಿಸಲಾಗಿದೆ. ವಿಪರೀತ ಮಳೆಯಿಂದಾಗಿ ಉಳುಮೆ ಮಾಡಿದ್ದ ಮೆಣಸಿನಕಾಯಿ ಬೆಳೆನಷ್ಟ ಉಂಟಾಗುವ ಭೀತಿಯಿಂದ ನಿನ್ನೆ ತಡರಾತ್ರಿ ಗ್ರಾಮದ ಹೊರವಲಯದ ಬೇವಿನ ಮರವೊಂದಕ್ಕೆ ಲುಂಗಿಯಿಂದ ಕತ್ತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಬಾಧೆಯಿಂದ ಈ ಆತ್ಮಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.
ಕುರುಗೋಡು ತಾಲೂಕಿನ ಕೊಳಗಲ್ಲು, ಮುಷ್ಠಗಟ್ಟೆ ಗ್ರಾಮಗಳಲ್ಲಿ ಕಳೆದೊಂದು ವಾರದ ಹಿಂದೆಯಷ್ಟೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿ ಕೊಂಡಿದ್ದು, ಗ್ರಾಮದಲ್ಲಿ ಮೌನದ ವಾತಾವರಣ ಮೂಡಿಸಿದೆ.