ಬಳ್ಳಾರಿ: ಪಾದರಾಯನಪುರದಲ್ಲಿ ನಡೆದ ಗಲಭೆಯನ್ನು ಗಣಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿಯ ಕಾಂಗ್ರೆಸ್ನ ಮಾಜಿ ಶಾಸಕ ಸಿರಾಜ್ ಶೇಖ್ ಖಂಡಿಸಿದ್ದಾರೆ.
ಪಾದರಾಯನಪುರದ ಘಟನೆಗೆ ಕಾಂಗ್ರೆಸ್ ಮಾಜಿ ಶಾಸಕ ಸಿರಾಜ್ ಶೇಖ್ ತೀವ್ರ ಖಂಡನೆ - Padarayanapura issues
ಪಾದರಾಯನಪುರದಲ್ಲಿ ವೈದ್ಯರು ಮತ್ತು ಆಶಾಕಾರ್ಯಕರ್ತೆಯರ ಮೇಲೆ ಅಲ್ಲಿನ ನಿವಾಸಿಗಳು ಹಲ್ಲೆ ನಡೆಸಿರುವುದು ನಿಜಕ್ಕೂ ಖೇದಕರ ಎಂದು ಕಾಂಗ್ರೆಸ್ನ ಮಾಜಿ ಶಾಸಕ ಸಿರಾಜ್ ಶೇಖ್ ಖಂಡಿಸಿದ್ದಾರೆ.
ಪಾದರಾಯನಪುರದಲ್ಲಿ ಅಂದಾಜು 18 ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿದ್ದು, ಅವರ ದ್ವಿತೀಯ ಸಂಪರ್ಕದ ಸುಮಾರು 58 ಮಂದಿಯನ್ನ ಕ್ವಾರಂಟೇನ್ ಮಾಡಬೇಕಿತ್ತು. ಆ ಪೈಕಿ 20 ಮಂದಿಯನ್ನ ಕ್ವಾರೈಂಟೇನ್ ಮಾಡಲಾಗಿದ್ದು, ಇನ್ನುಳಿದ 38 ಮಂದಿಯನ್ನ ಕ್ವಾರೈಂಟೇನ್ಗೆ ಒಳಪಡಿಸಲು ಬಂದಾಗ ಈ ಘಟನೆ ನಡೆದಿದೆ ಇದು ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.
ವೈದ್ಯರು ಮತ್ತು ಆಶಾಕಾರ್ಯಕರ್ತೆಯರ ಮೇಲೆ ಅಲ್ಲಿನ ನಿವಾಸಿಗಳು ಹಲ್ಲೆ ನಡೆಸಿರೋದು ನಿಜಕ್ಕೂ ಖೇದಕರ. ಅಲ್ಲಿನ ಸ್ಥಳೀಯ ಶಾಸಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರೊಡಗೂಡಿ ಮೊದಲೇ ಮೀಟಿಂಗ್ ಮಾಡಬೇಕಿತ್ತು. ಹಲ್ಲೆ ಮಾಡಿದ ಅವರನ್ನು ಕಿಡಿಗೇಡಿಗಳು ಅಂತ ಕರಿಬೇಕೋ ಎಂದು ನನಗೂ ಗೊತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.