ಕರ್ನಾಟಕ

karnataka

ETV Bharat / state

ಹೊಸಪೇಟೆಯಲ್ಲಿ ದುಬಾರಿಯಾದ ಹೂವಿನ ಬೆಲೆ... ಬೆಳಕಿನ ಹಬ್ಬಕ್ಕೆ ರೈತರಿಗೆ ಬಂಪರ್​ - ಹೂವಿನ ವ್ಯಾಪರಿ ಸಂಘದ ಅಧ್ಯಕ್ಷ ದಸ್ತಗಿರಿ ಖಾನ್ ಹೇಳಿಕೆ

ಮಾರುಕಟ್ಟೆಯಲ್ಲಿ ಹೂಗಳಿಗೆ ತುಂಬಾ ಬೇಡಿಕೆಯಿದ್ದು, ದೀಪಾವಳಿ ಹಬ್ಬಕ್ಕೆ ವ್ಯಾಪರಸ್ಥರಿಗೆ ಉತ್ತಮ ಬೆಲೆಗೆ ಹೂಗಳು ಮಾರಾಟವಾಗುತ್ತಿದೆ ಎಂದು ಮಹಾತ್ಮ ಗಾಂಧಿ ಹೂವಿನ ವ್ಯಾಪರಿ ಸಂಘದ ಅಧ್ಯಕ್ಷ ದಸ್ತಗಿರಿ ಖಾನ್  ಹೇಳಿದರು.

ದುಬಾರಿಯಾದ ಹೂಗಳು: ದೀಪಾವಳಿಗೆ ಸಿಕ್ತು ಬಂಪರ್​ ಬೆಲೆ

By

Published : Oct 26, 2019, 5:11 PM IST

ಹೊಸಪೇಟೆ: ಮಾರುಕಟ್ಟೆಯಲ್ಲಿ ಹೂಗಳಿಗೆ ತುಂಬಾ ಬೇಡಿಕೆಯಿದ್ದು, ದೀಪಾವಳಿ ಹಬ್ಬಕ್ಕೆ ವ್ಯಾಪರಸ್ಥರಿಗೆ ಉತ್ತಮ ಬೆಲೆಗೆ ಹೂಗಳು ಮಾರಾಟವಾಗುತ್ತಿದೆ ಎಂದು ಮಹಾತ್ಮ ಗಾಂಧಿ ಹೂವಿನ ವ್ಯಾಪರಿ ಸಂಘದ ಅಧ್ಯಕ್ಷ ದಸ್ತಗಿರಿ ಖಾನ್ ಹೇಳಿದರು.

ದುಬಾರಿಯಾದ ಹೂಗಳು: ದೀಪಾವಳಿಗೆ ಸಿಕ್ತು ಬಂಪರ್​ ಬೆಲೆ

ಇಷ್ಟು ದಿವಸ ಹೂಗಳಿಗೆ ಬೆಲೆ ಸಿಕ್ಕಿರಲಿಲ್ಲ. ಇವತ್ತು ನಮ್ಮ ವ್ಯಾಪಾರಸ್ಥರು ಒಳ್ಳೆಯ ಬೆಲೆಗೆ ಹೂಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಚೆಂಡು ಹೂಗಳು 100 ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಸೇವಂತಿಗೆ 80 ರಿಂದ 90 ರೂ.ಗಳು ಬೆಲೆಯಲ್ಲಿ ಮಾರಾಟವಾಗುತ್ತಿವೆ.

ಸುಗಂಧ ರಾಜ ಹೂಗಳನ್ನು ನಾವು ಕುಷ್ಟಗಿಯಿಂದ ಆಮದು ಮಾಡಿಕೊಳ್ಳುತ್ತೇವೆ. ಇನ್ನಿತ್ತರ ಗುಲಾಬಿ ಹೂಗಳನ್ನು ಹಾಗೂ ಸೇವಂತಿಗೆ ಹೂಗಳನ್ನು ಬೆಂಗಳೂರು ಮತ್ತು ಮೈಸೂರಿನಿಂದ ತರೆಸಿಕೊಳ್ಳುತ್ತಿದ್ದೇವೆ. ಆದರೂ ಸಹ ನಮಗೆ ಹೂವಿನ ರೈತರು ಹೂಗಳನ್ನು ಹಬ್ಬ ಇರುವುದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದರು.

ABOUT THE AUTHOR

...view details