ಬಳ್ಳಾರಿ:ಜಿಲ್ಲೆಯ ಸಂಡೂರು ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ 72ನೇ ಗಣರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ ಧ್ವಜಾರೋಹಣ ವೇಳೆ ಧ್ವಜ ವಂದನೆ ಸಲ್ಲಿಸಲು ಗೈರಾಗಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನ ಜಿಲ್ಲಾ ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ.
ಗಣರಾಜ್ಯೋತ್ಸವ ಧ್ವಜ ವಂದನೆಗೆ ಗೈರು: ಐವರು ಪೊಲೀಸರು ಅಮಾನತು
72ನೇ ಗಣರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ್ದ ಧ್ವಜಾರೋಹಣ ವೇಳೆ ಧ್ವಜ ವಂದನೆಗೆ ಗೈರಾಗಿದ್ದ ಐವರು ಪೊಲೀಸ್ ಸಿಬ್ಬಂದಿಯನ್ನ ಅಮಾನತುಗೊಳಿಸಿದೆ.
ಪೊಲೀಸ್ ಸಿಬ್ಬಂದಿಯಾದ ರಘುಪತಿ, ವೆಂಕಟೇಶ ನಾಯ್ಕ, ಕಾಳಿಂಗಪ್ಪ, ಜಂಭುನಾಥ, ವೇಣುಗೋಪಾಲ ಎಂಬುವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಆದೇಶ ಹೊರಡಿಸಿದ್ದಾರೆ.
ಈ ಎಲ್ಲ ಸಿಬ್ಬಂದಿ ಸಂಡೂರು ಶಾಸಕ ಈ. ತುಕಾರಾಂ ಸೇರಿದಂತೆ ಇನ್ನಿತರ ಗಣ್ಯರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಮೊದಲೇ ನಿಯೋಜನೆಗೊಂಡಿದ್ದ ಧ್ವಜ ವಂದನೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಈ ಹಿನ್ನೆಲೆ ರಾಷ್ಟ್ರೀಯ ಹಬ್ಬಕ್ಕೆ ಅಗೌರವ ಸೂಚಿಸಿದ್ದಾರೆಂದು ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿಯವರು ಸಲ್ಲಿಸಿದ ವರದಿಯನ್ನಾಧರಿಸಿ ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.