ಕರ್ನಾಟಕ

karnataka

ETV Bharat / state

ಸಚಿವ ಸ್ಥಾನ ಅಲ್ಲ, ವಿಜಯನಗರ ಜಿಲ್ಲೆ ನನ್ನ ಮೊದಲ ಆದ್ಯತೆ: ಶಾಸಕ ಆನಂದ್​ ಸಿಂಗ್​​ - ಶಾಸಕ ಆನಂದ್ ಸಿಂಗ್ ಭಾಷಣ

ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆನಂದ್​ ಸಿಂಗ್, ವಿಜಯನಗರವನ್ನು ಜಿಲ್ಲೆಯಾಗಿ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದರು.

mla anand sing
ಶಾಸಕ ಆನಂದ್​ ಸಿಂಗ್​

By

Published : Jan 11, 2020, 1:35 PM IST

ಬಳ್ಳಾರಿ: ನನ್ನ ಮೊದಲ ಆದ್ಯತೆ ಸಚಿವನಾಗುವುದಲ್ಲ, ವಿಜಯನಗರ ಜಿಲ್ಲೆ ರಚನೆಗೆ ಒತ್ತು ನೀಡುವುದು ಎಂದು ವಿಜಯನಗರ ಶಾಸಕ ಆನಂದ್​ ಸಿಂಗ್ ಹೇಳಿದರು.

ಶಾಸಕ ಆನಂದ್​ ಸಿಂಗ್​

ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿ ಉತ್ಸವವನ್ನು ಮೈಸೂರು ದಸರಾದಂತೆ ಆಚರಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಶಾಸಕರು ಗೈರು: ಉತ್ಸವದ ಚಾಲನೆ ವೇಳೆ ಕಾಂಗ್ರೆಸ್ ಶಾಸಕರ ಗೈರು ಎದ್ದು ಕಾಣುತ್ತಿತ್ತು. ಶಾಸಕರಾದ ಜೆ.ಎನ್.ಗಣೇಶ, ಪಿ.ಟಿ.ಪರಮೇಶ್ವರ ನಾಯ್ಕ, ತುಕಾರಾಂ, ಬಿ.ನಾಗೇಂದ್ರ, ಭೀಮಾ ನಾಯ್ಕ ಉತ್ಸವಕ್ಕೆ ಆಗಮಿಸದೆ ದೂರ ಉಳಿದಿದ್ದರು. ಇದಲ್ಲದೆ, ಬಿಜೆಪಿ ಶಾಸಕರಾದ ಸೋಮಲಿಂಗಪ್ಪ, ಕರುಣಾಕರ ರೆಡ್ಡಿ ಕೂಡಾ ಗೈರಾಗಿದ್ದರು.

ABOUT THE AUTHOR

...view details