ಹೊಸಪೇಟೆ: 66 ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಪ್ರಕೃತಿ ಮತ್ತು ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಸತೀಶ್ ಮುರಾಳ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಲೆಯ ಮೇಲೆ ಪಾತರಗಿತ್ತಿ ಮೊಟ್ಟೆ ಇಡುತ್ತಿರುವ ಛಾಯಾಚಿತ್ರ: ಕೊಪ್ಪಳದ ಸತೀಶ್ಗೆ ಪ್ರಥಮ ಸ್ಥಾನ - butterfly
66 ನೇ ವನ್ಯಜೀವಿ ಸಪ್ತಾಹ ಪ್ರಯುಕ್ತ ದರೋಜಿ ಕರಡಿಧಾಮ, ಹಾಗೂ ವನ್ಯಜೀವಿಗಳ ವಲಯ, ಕಮಲಾಪುರ ಹಮ್ಮಿಕೊಂಡಿದ್ದ ಪ್ರಕೃತಿ ಮತ್ತು ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳ ಸತೀಶ್ ಮುರಾಳ ಅವರಿಗೆ ಪ್ರಥಮ ಸ್ಥಾನ ಲಭಿಸಿದೆ.
ಕೊಪ್ಪಳ ಸತೀಶ್ ಮುರಾಳ
ಎಲೆಯ ಮೇಲೆ ಪಾತರಗಿತ್ತಿ ಮೊಟ್ಟೆ ಇಡುತ್ತಿರುವ ದೃಶ್ಯವನ್ನು ಸತೀಶ್ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದರು. ಈ ಸುಂದರ ಫೋಟೋಗೆ ಪ್ರಥಮ ಸ್ಥಾನ ಲಭಿಸಿದ್ದು, ಪ್ರಶಸ್ತಿ ಪತ್ರದೊಂದಿಗೆ 3,000 ರೂ. ನಗದು ನೀಡಿ ಗೌರವಿಸಲಾಗಿದೆ.
ಉಪವಲಯ ಅರಣ್ಯಾಧಿಕಾರಿ ವೆಂಕಟೇಶ ನಾಯಕ ಅವರ ಛಾಯಾಚಿತ್ರಕ್ಕೆ ದ್ವಿತೀಯ ಹಾಗೂ ರಾಮಸಾಗರದ ಜ್ಞಾನೇಶ್ವರ ಅವರ ಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ. ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿಗಳನ್ನು ವಿತರಿಸಲಾಯ್ತು.