ಕರ್ನಾಟಕ

karnataka

ETV Bharat / state

ಹೊಸಪೇಟೆ: ಸಾರಿಗೆ ನೌಕರರ ವಿರುದ್ಧ ವಜಾ ಅಸ್ತ್ರ ಪ್ರಯೋಗ - ಹೊಸಪೇಟೆ ವಿಭಾಗದ ಒಬ್ಬ ತರಬೇತಿ ನೌಕರ

ಹೊಸಪೇಟೆ ವಿಭಾಗದ ಒಬ್ಬ ತರಬೇತಿ ನೌಕರನನ್ನು ಸೇವೆಯಿಂದ ತೆಗೆದು ಹಾಕಿದ್ದು, ಮತ್ತೊಬ್ಬ ನೌಕರನನ್ನು ವಜಾ ಮಾಡಿದೆ.

Hosapete
Hosapete

By

Published : Apr 18, 2021, 5:07 PM IST

ಹೊಸಪೇಟೆ: ಸಾರಿಗೆ ಮುಷ್ಕರವನ್ನು ಹತ್ತಿಕ್ಕಲು ಅಧಿಕಾರಿಗಳು ನೌಕರರ ಮೇಲೆ ಗದಾ ಪ್ರಹಾರ ನಡೆಸುತ್ತಿದ್ದಾರೆ.

ಹೊಸಪೇಟೆ ವಿಭಾಗದ ಒಬ್ಬ ತರಬೇತಿ ನೌಕರನನ್ನು ಸೇವೆಯಿಂದ ತೆಗೆದು ಹಾಕಿದ್ದು, ಮತ್ತೊಬ್ಬ ನೌಕರನನ್ನು ವಜಾ ಮಾಡಿದೆ.

ಗೈರು ಹಾಜರಿ ಮತ್ತು ಸಾರಿಗೆ ಆದಾಯ ದುರುಪಯೋಗದ ಆರೋಪದಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಖಚಿತಪಡಿಸಿದ್ದಾರೆ.

ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕ್ರಮ ತೆಗದುಕೊಳ್ಳಬೇಕಾಗುತ್ತದೆ. ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರುವ ನೌಕರರ ವಿರುದ್ಧ ಮೇಲಾಧಿಕಾರಿಯಿಂದ‌ ಕಠಿಣ ಕ್ರಮ ತೆಗದುಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಅಧಿಕಾರಿ ಜಿ.ಶೀನಯ್ಯ ಈಟಿವಿ ಭಾರತಕ್ಕೆ ತಿಳಿಸಿದರು.

ABOUT THE AUTHOR

...view details