ಹೊಸಪೇಟೆ: ಫಸಲಿಗೆ ಬಂದ ಕಬ್ಬಿನ ಬೆಳೆಗೆ ಬೆಂಕಿ ಬಿದ್ದು, 4 ಎಕರೆ ಪ್ರದೇಶದ ಕಬ್ಬು ನಾಶವಾದ ಘಟನೆ ತಾಲೂಕಿನ ಕಮಲಾಪುರದ ಕೆರೆತಾಂಡದ ಬಳಿ ಭಾನುವಾರ ನಡೆದಿದೆ.
ಕಬ್ಬಿನ ಹೊಲಕ್ಕೆ ಬೆಂಕಿ: 4 ಎಕರೆ ಬೆಳೆ ನಾಶ
ಹೊಸಪೇಟೆ ತಾಲೂಕಿನ ಕಮಲಾಪುರದ ಕೆರೆ ತಾಂಡದ ಬಳಿ ಇಂದು ಕಬ್ಬಿನ ಹೊಲಕ್ಕೆ ಬೆಂಕಿ ಬಿದ್ದ ಪರಿಣಾಮ ನಾಲ್ಕು ಎಕರೆ ಬೆಳೆದು ನಿಂತ ಕಬ್ಬು ಸುಟ್ಟು ಕರಕಲಾಗಿದೆ.
ನಾಲ್ಕು ಎಕರೆ ಬೆಳೆದು ನಿಂತ ಕಬ್ಬು ನಾಶ
ಕೂಡಲೇ ಸ್ಥಳೀಯರು ಹಾಗೂ ರೈತರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ, ಗಾಳಿ ಹೆಚ್ಚಾಗಿದ್ದರಿಂದ ಬೆಂಕಿ ತೀವ್ರತೆ ಹೆಚ್ಚಾಗುತ್ತಲೇ ಇತ್ತು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಯಶಸ್ವಿಯಾದರು.
ಗಾಳಿಯಲ್ಲಿ ಹಾರಿ ಬಂದ ಬೆಂಕಿ ಕಿಡಿಯಿಂದ ಈ ಘಟನೆ ನಡೆದಿದೆ ಎಂದು ರೈತರು ತಿಳಿಸಿದರು. ಸೀತಮ್ಮ ಎಂಬುವವರಿಗೆ ಸೇರಿದ 2.5 ಎಕರೆ ಹಾಗೂ ಮಾರೆಮ್ಮ ಎಂಬುವವರ 1.5 ಎಕರೆ ಕಬ್ಬಿನ ಹೊಲ ಇದಾಗಿದೆ ಎಂದು ಹೊಸಪೇಟೆ ಅಗ್ನಿಶಾಮಕ ದಳದ ಅಧಿಕಾರಿ ಕೃಷ್ಣಾಸಿಂಗ್ ಈಟಿವಿ ಭಾರತಗೆ ಮಾಹಿತಿ ನೀಡಿದರು.