ಕರ್ನಾಟಕ

karnataka

ETV Bharat / state

ಗಣಿ ನಗರಿಯಲ್ಲಿ ತಪ್ಪಿದ ಭಾರೀ ಅಗ್ನಿ ಅವಘಡ - Fire accident in Bellary City

ಬಳ್ಳಾರಿ ನಗರದ ಎಸ್ಪಿ ವೃತ್ತದಿಂದ ಕುಮಾರಸ್ವಾಮಿ ದೇಗುಲ ರಸ್ತೆಯಲ್ಲಿ ಶಾಪಿಂಗ್ ಮಾಲ್​ಗಳ ನಡುವೆಯೇ ಗುಡಿಸಲಿದೆ. ಗುಡಿಸಲಿನಲ್ಲಿ ಯಾರೂ ವಾಸವಿಲ್ಲದ ಕಾರಣ ಅದನ್ನು ತೆರವುಗೊಳಿಸಲು ಕಾರ್ಮಿಕರು ಹುಲ್ಲಿಗೆ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಅವಾಂತರ ಸೃಷ್ಠಿಯಾಗಿದೆ.

ಗಣಿ ನಗರಿಯಲಿ ತಪ್ಪಿದ ಭಾರೀ ಅಗ್ನಿ ಅವಘಡ

By

Published : Nov 12, 2019, 1:22 PM IST

ಬಳ್ಳಾರಿ: ನಗರದ ಎಸ್ಪಿ ವೃತ್ತದ ಬಳಿಯ ಗುಡಿಸಲಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದೆ.

ಎಸ್ಪಿ ವೃತ್ತದಿಂದ ಕುಮಾರಸ್ವಾಮಿ ದೇಗುಲ ರಸ್ತೆಯಲ್ಲಿ ಶಾಪಿಂಗ್ ಮಾಲ್​ಗಳ ನಡುವೆಯೇ ಗುಡಿಸಲಿದೆ. ಗುಡಿಸಲಿನಲ್ಲಿ ಯಾರೂ ವಾಸವಿಲ್ಲದ ಕಾರಣ ಅದನ್ನು ತೆರವುಗೊಳಿಸಲು ಕಾರ್ಮಿಕರು ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಅವಾಂತರ ಸೃಷ್ಟಿಯಾಗಿದೆ.

ಗಣಿ ನಗರಿಯಲಿ ತಪ್ಪಿದ ಭಾರೀ ಅಗ್ನಿ ಅವಘಡ

ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ಹೊಗೆ ಜಾಸ್ತಿಯಾಗಿ ಅಕ್ಕಪಕ್ಕದ ಕಟ್ಟಡಗಳ ಮಾಲೀಕರು ಹಾಗೂ ಕಾರ್ಮಿಕರು ಗಾಬರಿಯಾಗಿ ಹೊರಗಡೆ ಬಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜ ನೇತೃತ್ವದ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕಾಗಮಿಸಿ ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾದರು.ಸುದೈವವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ABOUT THE AUTHOR

...view details