ಹೊಸಪೇಟೆ (ವಿಜಯನಗರ): ತಾಲೂಕಿನ ಪಾಪಿನಾಯಕಹಳ್ಳಿಯಲ್ಲಿ 20 ಹಾಗೂ ವೆಂಕಟಾಪುರದಲ್ಲಿ 12 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.
ಪಾಪಿನಾಯಕನ ಹಳ್ಳಿಯ ರೈಲು ನಿಲ್ದಾಣದ ಬಳಿ ಎಲೆಕ್ಟ್ರಿಸಿಟಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ 20 ನೌಕರರು ಸೋಂಕಿಗೆ ತುತ್ತಾಗಿದ್ದಾರೆ. ವೆಂಕಟಾಪುರದಲ್ಲಿ 12 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ಜನರು ಹೋಮ್ ಐಸೋಲೇಷನ್ ಮತ್ತು ಹೋಮ್ ಕ್ವಾರಂಟೈನ್ಗೆ ಒಪ್ಪುತ್ತಿಲ್ಲ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ನಾವು ಗ್ರಾಮದಲ್ಲಿ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಸೊಂಕು ನಿಯಂತ್ರಿಸಲು ಸೋಂಕಿತರ ಸಹಕಾರವೂ ಮುಖ್ಯ. ಹೋಂ ಐಸೋಲೇಷನ್, ಹೋಮ್ ಕ್ವಾರಂಟೈನ್ಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ದಾವಣಗೆರೆಯಲ್ಲಿ ಮಾಸ್ಕ್ ಅಭಿಯಾನ : ಮುಖಗವಸು ಹಾಕದ ವ್ಯಾಪಾರಿಗೆ ಎಸ್ಪಿ ಕಪಾಳಮೋಕ್ಷ