ಬಳ್ಳಾರಿ: ನಗರದ ಮೋತಿ ವೃತ್ತದ ಬಳಿ ಪೇಸಿಎಂ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಳ್ಳಾರಿ ಜಿಲ್ಲಾ ಎಸ್‍ಪಿ ಸೈದುಲು ಅಡಾವತ್ ಅವರು, ರೈಲ್ವೆ ಇಲಾಖೆಗೆ ಸೇರಿದ ಕಂಪೌಂಡ್ ಮೇಲೆ ಅನುಮತಿ ಇಲ್ಲದೇ ಪೋಸ್ಟರ್ ಅಂಟಿಸುವ ಮೂಲಕ ಯಾವುದೇ ಸಂದರ್ಭದಲ್ಲಿ ಶಾಂತಿ ಭಂಗವಾಗುವ ಸಂಭವವಿದ್ದು, ಪೊಲೀಸ್ ಇಲಾಖೆಯ ಅಥವಾ ಪಾಲಿಕೆಯ ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳವಾದ ರೈಲ್ವೆ ಇಲಾಖೆಯ ಕಾಂಪೌಂಡ್‍ಗೆ ಭಿತ್ತಿ ಪತ್ರ ಅಂಟಿಸಿ ಸೌಂದರ್ಯ ಹಾಳು ಮಾಡಲಾದ ಹಿನ್ನೆಲೆಯಲ್ಲಿ ಅಪರಿಚಿತರ ವಿರುದ್ಧ ಗಾಂಧಿನಗರ ಠಾಣೆಯಲ್ಲಿ ಐಪಿಸಿ 133/22, 1860, (ಯು/ಎಸ್290), 1951 ಮತ್ತು 1981(ಯು/ಎಸ್3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.