ಹೊಸಪೇಟೆ (ಬಳ್ಳಾರಿ): ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಶುದ್ಧ ನೀರಿನ ಘಟಕ ಪುನಃ ಕಾರ್ಯಾರಂಭ ಮಾಡಿದ್ದು, ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅನಕೂಲವಾಗಿದೆ.
ಹಲವು ದಿನಗಳಿಂದ ಶುದ್ಧ ನೀರಿನ ಘಟಕ ಸ್ಥಗಿತಗೊಂಡಿತ್ತು. ಇದರಿಂದ ಪ್ರವಾಸಿಗರು ಪರದಾಡುವಂತಾಗಿತ್ತು. ಈಗ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡಿ, ನೀರಿನ ದಾಹ ನೀಗಿಸಿದೆ.
ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಶುದ್ಧ ನೀರಿನ ಘಟಕ ಕಾರ್ಯಾರಂಭ ದೇವಸ್ಥಾನದ ಆವರಣದ ಶುದ್ಧ ನೀರಿನ ಘಟಕ ಹಲವು ದಿನಗಳಿಂದ ಸ್ಥಗಿತಗೊಂಡಿತ್ತು. ಪ್ರವಾಸಿಗರು ಹಾಗೂ ಭಕ್ತರು ಕುಡಿಯುವ ನೀರಿಗೆ ಪರದಾಡುವಂತಾಗಿತ್ತು. ಈ ಕುರಿತು ಈಟಿವಿ ಭಾರತ್ ಸೆ.1 ರಂದು ‘ವಿಶ್ವವಿಖ್ಯಾತ ಹಂಪಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆ, ಪ್ರವಾಸಿಗರು, ಭಕ್ತರ ಪರದಾಟ’ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ಈಗ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯು ಶುದ್ಧ ನೀರಿನ ಘಟಕವನ್ನು ಸರಿಪಡಿಸಿದ್ದು, ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಅನುಕೂಲವಾಗಿದೆ.
ಇದನ್ನೂ ಓದಿ: ವಿಶ್ವವಿಖ್ಯಾತ ಹಂಪಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆ, ಪ್ರವಾಸಿಗರು, ಭಕ್ತರ ಪರದಾಟ