ಕರ್ನಾಟಕ

karnataka

ETV Bharat / state

ಪಠ್ಯದಲ್ಲಿ ಜನಪದ ಕಲೆಗಳಿಗೆ ಒತ್ತು ನೀಡಬೇಕು: ಮಂಜಮ್ಮ ಜೋಗತಿ

ನನ್ನ ಬದುಕು ಪಠ್ಯವಾದರೆ ಸಾಲದು. ಜನಪದ ಕಲೆಗಳ ಬಗ್ಗೆ ಪಠ್ಯದಲ್ಲಿ ಹೆಚ್ಚಿನ ಒತ್ತುಕೊಡಬೇಕು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ಹೇಳಿದರು.

felicitates to Manjamma Jogati
ಮಂಜಮ್ಮ ಜೋಗತಿ ಅವರಿಗೆ ಸನ್ಮಾನ

By

Published : Feb 20, 2021, 10:26 PM IST

ಬಳ್ಳಾರಿ: ನಗರದ ಬಾಲಕಿಯರ ಸರ್ಕಾರಿ ಪದವಿ ‌ಪೂರ್ವ ಕಾಲೇಜಿನಲ್ಲಿ ಇಂದು ಹಂದ್ಯಾಳಿನ ಮಹಾದೇವ ತಾತ ಕಲಾ ಸಂಘದ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಅವರಿಗೆ ಸನ್ಮಾನ ಮತ್ತು ರಂಗಭೂಮಿಗೆ ಮಹಿಳೆಯರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸನ್ಮಾನಿತರಾಗಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ಅವರು, ನನ್ನ ತಂದೆಗೆ 21 ಜನ‌ ಮಕ್ಕಳು. ನಂತರದ ದಿನಗಳಲ್ಲಿ ನನ್ಮ ದೈಹಿಕ, ಮನೋ ಆಶಯಗಳ ಬದಲಾಯಿತು. ಎಸ್​ಎಸ್​​ಎಲ್​ಸಿ ಫೇಲಾದ ನಾನು ಕಲೆಯನ್ನು ನಂಬಿದೆ. ಇದರಿಂದಾಗಿ ನನ್ನ ವ್ಯಕ್ತಿತ್ವ ಬೆಳೆಯಿತು. ಈಗ ನನ್ನ ಬದುಕೇ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ ಎಂದರು.

ಮಂಜಮ್ಮ ಜೋಗತಿ ಅವರಿಗೆ ಸನ್ಮಾನ..

ಯಾವುದಕ್ಕೂ ಭಕ್ತಿ, ಶ್ರದ್ಧೆ ಮುಖ್ಯ. ತಪ್ಪು‌ಮಾಡಿದ ನನ್ನ ಗುರು ಕಾಳವ್ವ ಜೋಗತಿಗೆ ಕಪಾಳ ಮೋಕ್ಷ ಮಾಡುವಂತಹ ಪರಿಸ್ಥಿತಿ ಎದುರಿಸಿದೆ. ಅನೇಕರು ನನಗೆ ಮೋಸ ಮಾಡಿದರು. ಆದರೂ ಕೊನೆಗೂ ಕಾಳಮ್ಮ ಜೋಗತಿ ಅವರೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದರು. ಅದಕ್ಕಾಗಿ‌ ಏನೇ ಆಗಲಿ ಗುರು ಹಿರಿಯರನ್ನು ನಾವು‌ ಮರೆಯಬಾರದು ಎಂದರು. ನನ್ನಂತಹವರನ್ನು ನೋಡಿದ ಮೇಲೆ ತೃತೀಯ ಲಿಂಗಿಗಳ ಬಗ್ಗೆ ಗೌರವ ಹೆಚ್ಚುತ್ತದೆ. ನನ್ನ ಬದುಕು ಪಠ್ಯವಾದರೆ ಸಾಲದು, ಜನಪದ ಕಲೆಗಳ ಬಗ್ಗೆ ಪಠ್ಯದಲ್ಲಿ ಹೆಚ್ಚಿನ ಒತ್ತುಕೊಡಬೇಕಿದೆ ಎಂದರು.

ಉಪನ್ಯಾಸಕ ಡಾ.ಯು. ಶ್ರೀನಿವಾಸಮೂರ್ತಿ ಮಾತನಾಡಿ ಮಂಜಮ್ಮ ಜೋಗತಿ ಅವರ ಕುರಿತು ನೀವು ಮುಂದಿನ‌ ದಿನಗಳಲ್ಲಿ ಪಠ್ಯವಾಗಿ ಓದುವ ಸಂದರ್ಭ ಬರಬಹುದು. ಮಹಿಳೆಯರಿಗೆ ಶಿಕ್ಷಣ ಮಹತ್ವದ ಬಗ್ಗೆ ತಿಳಿಸಿ, ಲಿಂಗತಾರತಮ್ಯ ಹೋಗಲಾಡಿಸುವುದು ಸಹ ಮುಖ್ಯ ಎಂದರು.

ಮಹಾದೇವ ತಾತ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ ಮಾತನಾಡಿ, ರಂಗಭೂಮಿ ಮತ್ತು ಜನಪದದ ಜೋಗತಿ ಕಲೆ ಪ್ರಕಾರದಲ್ಲಿ ಅಪರೂಪದ ವ್ಯಕ್ತಿತ್ವದ ಮಂಜಮ್ಮ ಜೋಗತಿ ಅವರ ಬಗ್ಗೆ ಕೃತಿ ಪ್ರಕಟಗೊಂಡಿದೆ. ಅದನ್ನು ಓದಿ ಅಂತಹವರೊಂದಿಗೆ ನಿಮ್ಮ‌ಒಂದು ದಿನದ ಸಮಯ ಸದಾ ಸ್ಮರಣೀಯವಾಗಲಿ ಎಂದರು.

ABOUT THE AUTHOR

...view details