ವಿಜಯನಗರ: ತುಂಗಭದ್ರಾ ಜಲಾಶಯ ಆವರಣ ಪ್ರವೇಶಿಸಲು ಪ್ರವಾಸಿಗರಿಗೆ ಶುಲ್ಕ ವಿಧಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಜಲಾಶಯ ನಿರ್ಮಾಣವಾದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜಲಾಶಯ ವೀಕ್ಷಣೆಗೆ ಶುಲ್ಕ ವಿಧಿಸಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇಷ್ಟು ದಿನ ಉದ್ಯಾನ ವೀಕ್ಷಿಸಲು ಮಾತ್ರ 25 ರೂಪಾಯಿ ಶುಲ್ಕ ನಿಗದಿ ಮಾಡಲಾಗಿತ್ತು. ಆದರೆ, ಜಲಾಶಯ ವೀಕ್ಷಣೆಗೆ ಯಾವುದೇ ಶುಲ್ಕ ಇರಲಿಲ್ಲ, ಇದೀಗ ಉದ್ಯಾನದ ಶುಲ್ಕದ ಜೊತೆಗೆ ಡ್ಯಾಂ ವೀಕ್ಷಣೆಗೂ ಶುಲ್ಕವೆಂದು ಹತ್ತು ರೂಪಾಯಿ ನಿಗದಿ ಮಾಡಲಾಗಿದೆ. ಜೊತೆಗೆ ಉದ್ಯಾನದಲ್ಲಿ ಉಪಾಹಾರ ಹಾಗೂ ಇತರ ತಿಂಡಿ, ತಿನಿಸುಗಳ ಬೆಲೆ ಕೂಡ ಹೆಚ್ಚಳವಾಗಿದೆ. 20 ರೂ. ಬೆಲೆಯ ನೀರಿನ ಬಾಟಲ್ 30 ರೂ.ಗೆ ಮಾರಾಟ ಮಾಡಿದರೆ, ತಂಪು ಪಾನೀಯಗಳಿಗೆ ಎಂಆರ್‌ಪಿ ಬೆಲೆಗಿಂತ 10 ರಿಂದ 20 ರೂ. ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು : ನಡುಗಡ್ಡೆಯಲ್ಲಿ ಸಿಲುಕಿದ್ದ ರೈತರ ರಕ್ಷಣೆ