ಬಳ್ಳಾರಿ:ತಾಯಿ ಇಲ್ಲದ ತಬ್ಬಲಿಯಾಗಿರುವ ಬಾಲಕಿಯನ್ನ ಪೋಷಣೆ ಮಾಡಬೇಕಿದ್ದ ತಂದೆಯೇ, ಪದೇ ಪದೆ ಮಲ ಮಾಡುತ್ತಾಳೆ ಎಂದು ಮಗಳ ಗುದದ್ವಾರಕ್ಕೆ ಸುಡುವ ಗಂಜಿಯನ್ನು ಸುರಿದಿರುವ ಅಮಾನವೀಯ ಘಟನೆ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ.
ಇತ್ತ ಪಕ್ಕದ ಮನೆಯ ಪಾಪಿಯೊಬ್ಬ ಇದೇ ಬಾಲಕಿಯ ಅಕ್ಕನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಾಯಿ ಇಲ್ಲದ ಈ ಇಬ್ಬರು ಬಾಲಕಿಯರ ಪಾಡು ದೇವರಿಗೆ ಪ್ರೀತಿ ಎಂಬಂತಾಗಿದೆ.
ಜಿಲ್ಲೆಯ ಸಿರುಗುಪ್ಪ ಪಟ್ಟಣದ ಡ್ರೈವರ್ ಕಾಲೋನಿಯಲ್ಲಿರುವ ಪಾಪಿಯೋರ್ವ ತಾಯಿ ಪ್ರೀತಿ ಕಾಣದ 3 ರಿಂದ 4 ವರ್ಷ ವಯೋಮಾನದ ಬಾಲಕಿಯರನ್ನು ರಕ್ಷಣೆ ಮಾಡೋದು ಬಿಟ್ಟು ಚಿತ್ರಹಿಂಸೆ ನೀಡಿದ್ದಾನೆ. ತನ್ನ ಕಿರಿಯ ಮಗಳು ಪದೇ ಪದೆ ಮಲ ವಿಸರ್ಜನೆ ಮಾಡುತ್ತಾಳೆ ಎಂದು ಸುಡುವ ಗಂಜಿಯನ್ನು ಗುದದ್ವಾರಕ್ಕೆ ಸುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.