ಬಳ್ಳಾರಿ: ಎರಡನೇ ಬೆಳೆಗಳಿಗೆ ಆದಷ್ಟು ಬೇಗ ಭತ್ತದ ಸಸಿಗಳನ್ನು ಹಾಕಿ, ತಡವಾದರೆ ಕೊನೆಯಲ್ಲಿ ನೀರಿನ ಸಮಸ್ಯೆಯಾಗಬಹುದು ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಫೇಸ್ಬುಕ್ ಮೂಲಕ ಮೂರು ಜಿಲ್ಲೆಯ ರೈತರಲ್ಲಿ ಮನವಿ ಮಾಡಿಕೊಂಡರು.
ಬೇಗ ಭತ್ತ ನಾಟಿ ಮಾಡಿ, ಇಲ್ಲವಾದಲ್ಲಿ ನೀರಿನ ಸಮಸ್ಯೆಯಾಗುತ್ತದೆ: ರೈತ ಸಂಘದ ಅಧ್ಯಕ್ಷ ಮನವಿ - ಬಳ್ಳಾರಿಯಲ್ಲಿ ಭತ್ತದ ಬೆಳೆಗೆ ನೀರಿನ ಸಮಸ್ಯೆ ಸುದ್ದಿ
ಆದಷ್ಟು ಬೇಗ ಭತ್ತ ನಾಟಿ ಮಾಡಿ ,ಇಲ್ಲವಾದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಮನವಿ ಮಾಡಿದ್ದಾರೆ.
![ಬೇಗ ಭತ್ತ ನಾಟಿ ಮಾಡಿ, ಇಲ್ಲವಾದಲ್ಲಿ ನೀರಿನ ಸಮಸ್ಯೆಯಾಗುತ್ತದೆ: ರೈತ ಸಂಘದ ಅಧ್ಯಕ್ಷ ಮನವಿ farming paddy crop soon said farmers leaders](https://etvbharatimages.akamaized.net/etvbharat/prod-images/768-512-5806546-thumbnail-3x2-surya.jpg)
ಗಣಿನಾಡು ಬಳ್ಳಾರಿ, ಕೊಪ್ಪಳ, ರಾಯಚೂರು ಈ ಮೂರು ಜಿಲ್ಲೆಯ ಭಾಗದ ರೈತರು ಎರಡನೇ ಬೆಳೆಯ ಭತ್ತದ ಗದ್ದೆಗಳಿಗೆ ಸಸಿಗಳನ್ನು ಹಾಕಿ ಬೆಳೆ ಬೆಳೆಯಲು ಆರಂಭ ಮಾಡಿದ್ದಾರೆ. ರೈತರು ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಬೇಕು ಹಾಗೇ ನೀರಿನ ಬಗ್ಗೆ ಎಚ್ಚರಿಕೆ ಇರಬೇಕು. ಜಲಾಶಯದಲ್ಲಿ ಈ ವರ್ಷ ನೀರು ಹೆಚ್ಚಾಗಿದೆ ಎಂಬ ನಂಬಿಕೆ ತಪ್ಪು ಎಂದು ತಿಳಿಸಿದ್ದಾರೆ.
ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಭಾಗದ ರೈತರು ಎರಡನೇ ಬೆಳೆ ಬೆಳೆಯುತ್ತಿರುವುದರಿಂದ ನೀರಿನ ಬಳಕೆ ಹೆಚ್ಚಾಗಿ ಕೊನೆಯ ದಿನಗಳಲ್ಲಿ ಜಲಾಶಯದಲ್ಲಿ ನೀರಿನ ತೊಂದರೆಯಾಗುವ ನಿರೀಕ್ಷೆಗಳಿರುವುದರಿಂದ ಕೃಷಿ ಚಟುವಟಿಕೆಗಳನ್ನು ಬೇಗನೆ ಮಾಡಬೇಕೆಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಈ ಮೂರು ಜಿಲ್ಲೆಯ ರೈತರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಮತ್ತು ಸಂದೇಶ ಹಾಕುವ ಮೂಲಕ ಮನವಿಯನ್ನು ಮಾಡಿಕೊಂಡರು.