ಬಳ್ಳಾರಿ:ಉದ್ದೇಶಿತ ಕೈಗಾರಿಕೆ ಉದ್ದಿಮೆಗಳ ಸ್ಥಾಪನೆಗೆಂದು ವಶಪಡಿಸಿಕೊಂಡಿದ್ದ ಭೂಮಿಯನ್ನ ಮರಳಿ ರೈತರಿಗೆ ಹಿಂತಿರುಗಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲೆಯ ರೈತರು ಪಾದಯಾತ್ರೆ ಮೆರವಣಿಗೆ ಕೈಗೊಂಡರು.
ಕಳೆದ 11 ವರ್ಷ ಕಳೆದರೂ ಕೂಡ ಉದ್ದೇಶಿತ ಕೈಗಾರಿಕೆ ಉದ್ದಿಮೆಗಳ ಸ್ಥಾಪನೆಗೆ ಮುಂದಾಗದ ಕಾರಣ ರೈತರಿಂದ ವಶಪಡಿಸಿಕೊಂಡ ಭೂಮಿಯನ್ನ ಹಿಂತಿರುಗಿಸಬೇಕೆಂದು ಒತ್ತಾಯಿಸಿ ನಾನಾ ಕೈಗಾರಿಕೆಗಳಿಗೆ ಭೂಮಿ ನೀಡಿದ ಸಂತ್ರಸ್ತರು ನಗರದ ಅಲ್ಲೀಪುರ ತಾತನ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದ್ರು.
ಗಣಿನಗರಿ ಬಳ್ಳಾರಿ ಸಮೀಪದ ಕುಡಿತಿನಿ, ಹರಗಿನ ಡೋಣಿ, ವೇಣಿವೀರಾಪುರ, ಕೊಳಗಲ್, ಯರ್ರಂಗಳಿ ಗ್ರಾಮಗಳ ಸುತ್ತಲೂ ಅಂದಾಜು 10 ಸಾವಿರಕ್ಕೂ ಅಧಿಕ ಎಕರೆ ಭೂಮಿಯನ್ನ ಕೈಗಾರಿಕೆ ಉದ್ದಿಮೆಗಳ ಸ್ಥಾಪನೆಗೆಂದು ಕಳೆದ 11 ವರ್ಷಗಳ ಹಿಂದೆಯೇ ಲಕ್ಷ್ಮೀಮಿತ್ತಲ್ ಮತ್ತು ಬ್ರಹ್ಮಿಣಿ (ಉತ್ತಮ್ ಗಾಲ್ವಾ, ಫೆರೋಸ್) ಕಂಪನಿಗಳು ವಶಪಡಿಸಿಕೊಂಡಿದ್ದವು. ಆದರೆ, ಈವರಗೆ ಕೂಡ ಕೈಗಾರಿಕೆ ಉದ್ದಿಮೆ ಆರಂಭಿಸಲು ಮುಂದಾಗಿಲ್ಲ.
ಭೂಸಂತ್ರಸ್ತರಿಗೆ ಕನಿಷ್ಠ ಉದ್ಯೋಗ ಅವಕಾಶ ನೀಡಲಿಲ್ಲ. ಕೈಗಾರಿಕೆ ಉದ್ದಿಮೆಗಳ ಸ್ಥಾಪನೆಗೆ ಎಂದು ವಶಪಡಿಸಿಕೊಂಡ ಭೂಮಿಯನ್ನ ರೈತರಿಗೆ ವಾಪಸ್ ನೀಡಬೇಕೆಂಬುವುದು ಭೂಸಂತ್ರಸ್ಥರ ಆಗ್ರಹವಾಗಿದೆ.
ಕುಡಿತಿನಿ ಭೂಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆ ಮೆರವಣಿಗೆಯಲ್ಲಿ ಮುಖಂಡರಾದ ಯು.ಬಸವರಾಜ, ಕಾಮೇಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು.