ಬಳ್ಳಾರಿ:ಕೊರ್ಲಗುಂದಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಭರತ್ ರೆಡ್ಡಿ ಹೆಸರಿನಡಿ ನಕಲಿ ಫೇಸ್ ಬುಕ್ ಖಾತೆ ರಚನೆಯಾಗಿದ್ದು, ಆ ಫೇಸ್ಬುಕ್ ಖಾತೆಯ ಮೂಲಕ ಅನಾಮಧೇಯ ವ್ಯಕ್ತಿಯೊಬ್ಬನ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಈಗ ಬೆಳಕಿಗೆ ಬಂದಿದೆ.
ಜಿಪಂ ಸದಸ್ಯ ಭರತ ರೆಡ್ಡಿ ಹೆಸರಿನಡಿ ನಕಲಿ ಫೇಸ್ ಬುಕ್ ಖಾತೆ ಓಪನ್ ಹೌದು, ನಾರಾ ಭರತ್ ರೆಡ್ಡಿ ಯುವರ್ಸ್ ಫ್ರೆಂಡ್ಸ್ ಆನ್ ಫೇಸ್ ಬುಕ್ ಲೈವ್ಸ್ ಇನ್ ಹೊಸಪೇಟೆ (Nara Bharath Reddy your's in Facebook lives in Hospet) ಎಂಬ ಹೆಸರಿನಡಿ ಅನಾಮಧೇಯ ವ್ಯಕ್ತಿಯು ಫೇಸ್ ಬುಕ್ ಖಾತೆಯನ್ನ ತೆರೆದಿದ್ದಾನೆ. ಖುದ್ದಾಗಿ ಭರತ್ ರೆಡ್ಡಿ ಅವರೊಂದಿಗೇನೇ ಚಾಟಿಂಗ್ ಮಾಡಿ ಹಣದ ಬೇಡಿಕೆ ಇಟ್ಟಿರುವುದು ಬಹಳ ಅಚ್ಚರಿ ಸಂಗತಿಯಾಗಿದೆ.
ಜಿಪಂ ಸದಸ್ಯ ಭರತ ರೆಡ್ಡಿ ಹೆಸರಿನಡಿ ನಕಲಿ ಫೇಸ್ ಬುಕ್ ಖಾತೆ ಓಪನ್ ಈ ನಕಲಿ ಫೇಸ್ಬುಕ್ ಖಾತೆಗೆ ಎನ್.ಭರತ್ ರೆಡ್ಡಿ ಆಹ್ವಾನಿಸಿದ್ದಲ್ಲದೇ, ಅವರೊಂದಿಗೆ ಚಾಟಿಂಗ್ ಮಾಡಲಾರಂಭಿಸಿದ್ದಾನೆ. ಮೊದಲಿಗೆ ಭರತ್ ರೆಡ್ಡಿಯ ಕುಶಲೋಪರಿ ವಿಚಾರಿಸಿದ ಬಳಿಕ, ನಮ್ಮ ಸಂಬಂಧಿಕರನ್ನ ಆಸ್ಪತ್ರೆಗೆ ದಾಖಲಿಸಿದ್ದೇವೆ. ನನಗೆ ತುರ್ತಾಗಿ 13,000 ಹಣ ಬೇಕಾಗಿದೆ. ಗೂಗಲ್ ಪೇ ಅಥವಾ ಪೋನ್ ಪೇ ಮೂಲಕ ಈ ಹಣ ವರ್ಗಾವಣೆ ಮಾಡುವಂತೆ ಭರತ್ ರೆಡ್ಡಿಗೆ ಸಂದೇಶ ಕಳುಹಿಸಿದ್ದಾನೆ.
ಜಿಪಂ ಸದಸ್ಯ ಭರತ ರೆಡ್ಡಿ ಹೆಸರಿನಡಿ ನಕಲಿ ಫೇಸ್ ಬುಕ್ ಖಾತೆ ಓಪನ್ ಭರತ್ ರೆಡ್ಡಿ ಪೇಟಿಎಂ ನಂಬರ್ ಇದ್ದರೆ ಕಳಿಸಿ ಅಂತಾ ಹೇಳಿದಾರೆ. ಸಂದೇಶ ಮೂಲಕ ಆ ವ್ಯಕ್ತಿ ನಂಬರ್ ಕಳುಹಿಸಿದ್ದಾರೆ. ಬಳಿಕ ಭರತ್ ರೆಡ್ಡಿ ಸರ್ವರ್ ಬ್ಯುಸಿ ಇರೋದರಿಂದ ಹಣವನ್ನ ನಿಮ್ಮ ಕೈಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಮತ್ತೊಮ್ಮೆ ಪ್ರಯತ್ನಿಸುವಂತೆ ಆ ವ್ಯಕ್ತಿ ಭರತ್ ರೆಡ್ಡಿಗೆ ಮನವಿ ಮಾಡಿದ್ದಾರೆ.
ನಿಮ್ಮ ಸಂಬಂಧಿಕರು ಯಾವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಅಂತ ಹೇಳಿ, ಅಲ್ಲಿಗೆ ಹಣ ತಲುಪಿಸುವುದಾಗಿ ತಿಳಿಸಿದ್ದಾರೆ. ಆದರೆ, ಆ ಅನಾಮಧೇಯ ವ್ಯಕ್ತಿಯಿಂದ ಯಾವುದೇ ರೀತಿಯ ಮರು ಸಂದೇಶ ಬಾರದ ಹಿನ್ನೆಲೆ ಈ ಫೇಸ್ ಬುಕ್ಖಾತೆ ನಕಲಿ ಎಂದು ಖಚಿತಪಡಿಸಿಕೊಂಡಿದ್ದಾರೆ.
ಜಿಪಂ ಸದಸ್ಯ ಭರತ ರೆಡ್ಡಿ ಹೆಸರಿನಡಿ ನಕಲಿ ಫೇಸ್ ಬುಕ್ ಖಾತೆ ಓಪನ್ 'ನಮಸ್ಕಾರ ಗೆಳೆಯರೇ ಮತ್ತು ಹಿತೈಷಿಗಳೇ, ನಾರಾ ಭರತ್ ರೆಡ್ಡಿ ಹೆಸರಿನ ನಕಲಿ ಫೇಸ್ ಬುಕ್ ಖಾತೆಯನ್ನ ರಚಿಸಲಾಗಿದೆ. ಮತ್ತು ಹಣವನ್ನ ಕಳುಹಿಸಲು ಜನರನ್ನು ಕೇಳುತ್ತಿದ್ದಾರೆ. ದಯವಿಟ್ಟು ಇದನ್ನು ಗಮನಿಸಿ ಮತ್ತು ಅಂತಹ ಯಾವುದೇ ಸಂದೇಶಗಳಿಗೆ ಪ್ರತಿ ಕ್ರಿಯಿಸಬೇಡಿ. ನಾನು ನಕಲಿ ಖಾತೆಯ ಸ್ಕ್ರೀನ್ ಶಾಟ್‌ಗಳನ್ನ ಮತ್ತು ಕೆಳಗಿನ ಪ್ರೊಫೈಲ್‌ನ ಲಿಂಕ್ ಅನ್ನು ಲಗತ್ತಿಸುತ್ತಿದ್ದೇನೆ. ಧನ್ಯವಾದಗಳು!' ಎಂದು ಭರತ್ ರೆಡ್ಡಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಜಿಪಂ ಸದಸ್ಯ ಭರತ ರೆಡ್ಡಿ ಹೆಸರಿನಡಿ ನಕಲಿ ಫೇಸ್ ಬುಕ್ ಖಾತೆ ಓಪನ್