ಕರ್ನಾಟಕ

karnataka

ETV Bharat / state

ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಜನರ ಸುಲಿಗೆ: ಬಳ್ಳಾರಿಯಲ್ಲಿ ಇಬ್ಬರು ಆರೋಪಿಗಳ ಬಂಧನ - ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಜನರ ಸುಲಿಗೆ

ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಜನರ ಸುಲಿಗೆ. ಬಳ್ಳಾರಿ ಗ್ರಾಮೀಣ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ.

Bellary
ಬಳ್ಳಾರಿ

By

Published : Nov 26, 2022, 9:10 AM IST

ಬಳ್ಳಾರಿ:ಪೊಲೀಸ್‌ ಅಧಿಕಾರಿ ಸೋಗಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗದಗಿನ ಸಂಜಯ ಬಸಪ್ಪ ಕೊಪ್ಪದ (25) ಹಾಗೂ ಬಳ್ಳಾರಿಯ ನಂದೀಶ್ (24) ಬಂಧಿತ ಆರೋಪಿಗಳು.

ಇವರು ಸಾರ್ವಜನಿಕರಿಂದ ನಾಲ್ಕು ತೊಲೆ ಬಂಗಾರ, 1,500 ರೂ. ನಗದು ಹಾಗೂ ಎರಡು ಬೈಕ್‌ ಸುಲಿಗೆ ಮಾಡಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ಬಂಧನಕ್ಕೆ ಡಿಎಸ್‌ಪಿ ಸತ್ಯನಾರಾಯಣರಾವ್ ನೇತೃತ್ವದಲ್ಲಿ ಇನ್ಸ್​ಪೆಕ್ಟರ್ ನಿರಂಜನ, ಶಾರದಾ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ಲಂಚ ಪಡೆಯುತ್ತಿದ್ದ ದೇವಿಕೆರೆ ಪಂಚಾಯಿತಿ ಪಿಡಿಒ ಮೇಲೆ ಲೋಕಾಯುಕ್ತ ದಾಳಿ

ABOUT THE AUTHOR

...view details