ಕರ್ನಾಟಕ

karnataka

ETV Bharat / state

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವ ಕಾನೂನು ಜಾರಿಗೆ ಬರಲಿ  : ಮಾಜಿ ಸಂಸದೆ ಜೆ. ಶಾಂತಾ - ಪಶುವೈದ್ಯೆಯ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ

ವಿದೇಶದಲ್ಲಿರುವಂತಹ ಕಠಿಣ ಕಾನೂನುಗಳು ನಮ್ಮ ಭಾರತ ದೇಶದಲ್ಲಿ ಜಾರಿಯಾದ್ರೇ ಮಾತ್ರ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು‌ ನಿಲ್ಲುತ್ತವೆ ಎಂದು ಬಳ್ಳಾರಿಯ ಮಾಜಿ ಸಂಸದೆ ಜೆ.ಶಾಂತ ತಿಳಿಸಿದರು

ಪಶುವೈದ್ಯೆಯ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ
ಪಶುವೈದ್ಯೆಯ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ

By

Published : Dec 6, 2019, 4:18 AM IST

Updated : Dec 6, 2019, 11:25 AM IST

ಬಳ್ಳಾರಿ : ವಿದೇಶದಲ್ಲಿರುವ ಕಠಿಣ ಕಾನೂನುಗಳು ನಮ್ಮ ಭಾರತ ದೇಶದಲ್ಲಿ ಜಾರಿಯಾದ್ರೇ ಮಾತ್ರ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು‌ ನಿಲ್ಲುತ್ತವೆ ಎಂದು ಬಳ್ಳಾರಿಯ ಮಾಜಿ ಸಂಸದೆ ಜೆ.ಶಾಂತಾ ತಿಳಿಸಿದರು.

ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರವನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದೇಶಗಳಲ್ಲಿ ಅತ್ಯಾಚಾರ, ಕೊಲೆ ಮಾಡಿದವರಿಗೆ ಯಾವ ರೀತಿ ಗಲ್ಲು ಶಿಕ್ಷೆ ಹಾಗೂ ಕಠಿಣ ಶಿಕ್ಷೆ ನೀಡುತ್ತಾರೆಯೋ ಅದೇ ರೀತಿಯಾಗಿ ನಮ್ಮ ಭಾರತ ದೇಶದಲ್ಲಿ ಶಿಕ್ಷೆ ನೀಡಬೇಕು ಎಂದರು. ಸಾಮಾಜಿಕ ಜಾಲಾತಾಣಗಳಲ್ಲಿ ಅಶ್ಲೀಲ ವಿಡಿಯೋ, ಪೋಟೊಗಳು ಬರದಂತೆ ಕ್ರಮತೆಗದುಕೊಳ್ಳಬೇಕೆಂದು ಆಗ್ರಹಿಸಿದರು.

ಇನ್ನು ಇದೇ ವೇಳೆ ವಿದ್ಯಾರ್ಥಿನಿ ಸರಸ್ವತಿ ಮಾತನಾಡಿ, ನಮ್ಮ ತಂದೆ ತಾಯಿಗಳು ನಮ್ಮ ಮೇಲೆ ನಂಬಿಕೆ ಇಟ್ಟು ಶಾಲಾ ಕಾಲೇಜುಗಳಿಗೆ ಕಳಿಸುತ್ತಾರೆ. ಆದರೆ ಸಮಾಜದಲ್ಲಿ ಇಂತರ ಕೃತ್ಯಗಳನ್ನು ನೋಡಿದರೆ ನಮ್ಮಂತ ಹೆಣ್ಣು ಮಕ್ಕಳಿಗೆ ಭಯವಾಗುತ್ತದೆ ಎಂದರು. ಪ್ರತಿಯೊಂದು ಪ್ರದೇಶಗಳಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಬೇಕು. ಯುವತಿಯರು ಹಾಗೂ ಮಹಿಳೆಯರಿಗೆ ಸರ್ಕಾರ ಭದ್ರತೆಯನ್ನು ಒದಗಿಸಬೇಕೆಂದು ಹೇಳಿದರು.

ಪಶುವೈದ್ಯೆಯ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ
Last Updated : Dec 6, 2019, 11:25 AM IST

ABOUT THE AUTHOR

...view details